ಸತತವಾದ ಬೆಲೆ ಏರಿಕೆ ಯ ನಡುವೆ ಕಂಗಾಲಾಗಿದ್ದ ದೇಶದ ಜನತೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಯನ್ನು ಇಳಿಕೆ ಮಾಡಿ ನೆಮ್ಮದಿ ನೀಡಿದ್ದು ಇದರ ಬೆನ್ನಲ್ಲೇ ಈಗ ರಾಜ್ಯ ಸರ್ಕಾರವು ಕೂಡಾ ಬೆಲೆ ಇಳಿಕೆ ಮಾಡಿದೆ. ಹೌದು ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸುತ್ತಿದ್ದಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ವ್ಯಾಟ್ ಕಡಿತಗೊಳಿಸಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ನೆಮ್ಮದಿ ನೀಡಿದೆ
ಕರ್ನಾಟಕ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್ ಗೆ 7 ರೂ.ನಷ್ಟು ವ್ಯಾಟ್ ಕಡಿತಗೊಳಿಸಿದೆ.ಈ ಮೂಲಕ ರಾಜ್ಯ ಸರಕಾರಕ್ಕೆ 2100 ಕೋಟಿ ರೂ. ಆದಾಯ ದಲ್ಲಿ ನಷ್ಟವಾಗಲಿದೆ ಎಂಬ ಲೆಕ್ಕಾಚಾರ ಮಾಡಬಹುದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟರ್ ನಲ್ಲಿ ಈ ವಿಷಯ ತಿಳಿಸಿದ್ದು ಸರಕಾರದ ಈ ಕ್ರಮದಿಂದಾಗಿ ಪೆಟ್ರೋಲ್ ಬೆಲೆ ಲೀಟರ್ ಗೆ 95.50 ರೂ. ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 81.50 ರೂ.ಗೆ ಲಭಿಸಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸುಂಕದಲ್ಲಿ ಕಡಿತ ಮಾಡಿದ್ದು ರಾಜ್ಯ ಸರಕಾರ ಕೂಡ ಕೇಂದ್ರದ ನಿರ್ಧಾರದ ಬೆನ್ನಲ್ಲೇ ವ್ಯಾಟ್ ನಲ್ಲಿ ಕಡಿತ ಮಾಡಿದೆ ಇದರಿಂದ ಚುನಾವಣೆಯಲ್ಲಿ ಮತದಾರ ಬೆಲೆ ಏರಿಕೆಗೆ ತಕ್ಕ ಉತ್ತರ ನೀಡಿದಂತಾಗಿದ್ದು ಮತ್ತೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು