ಹುಬ್ಬಳ್ಳಿ –
ಭಾರತ ಬಂದ್ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಂದ್ ನ ಬಿಸಿ ಕಂಡು ಬರಲಿಲ್ಲ. ನಗರದಲ್ಲಿ ಎಂದಿನಂತೆ ರಸ್ತೆಗಿಳಿದ ಸಾರಿಗೆ ಬಸ್ ಗಳು, ಆಟೋ ಸಂಚಾರ ಯಥಾಸ್ಥಿತಿ ಯಾಗಿ ಕಂಡು ಬಂದಿತು.

ಎಂದಿನಂತೆ ಜನ ಜೀವನ ನಗರದಲ್ಲಿ ಕಂಡು ಬಂದಿತು.ಬಂದ್ ಕೇವಲ ಪ್ರತಿಭಟನೆಗೆ ಮೀಸಲಾ ದಂತೆ ನಗರದಲ್ಲಿ ಚಿತ್ರಣ ಚನ್ನಮ್ಮ ವೃತ್ತದಲ್ಲಿ ಎದ್ದು ಕಂಡಿತು.

ಹೊಸೂರು ವೃತ್ತದಲ್ಲಿ ಮತ್ತು ಚನ್ನಮ್ಮ ವೃತ್ತದಲ್ಲಿ ರೈತ ಮುಖಂಡರು ಪ್ರತಿಭಟನೆ ಮಾಡುತ್ತಿದ್ದಾರೆ. ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿ ರುವ ದೃಶ್ಯಗಳು ಕಂಡು ಬಂದವು

ಹತ್ತು ಗಂಟೆಯ ನಂತರ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶಿಲ್ದಾರರಿಗೆ ಮನವಿ ಸಲ್ಲಿಸಲಿದ್ದಾರೆ ಹೋರಾಟಗಾರರು.ಇನ್ನೂ ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.ಪ್ರತಿಭಟನಾಕಾರಕ್ಕಿಂತ ಪೊಲೀಸ ರೇ ಹೆಚ್ಚಿನ ಪ್ರಮಾಣದಲ್ಲಿ ಇದ್ದಿದ್ದು ಕಂಡು ಬಂದಿತು
