ಹುಬ್ಬಳ್ಳಿ –
ದಿನವಿಡಿ ಕಂಠಪೂರ್ತಿ ಕುಡಿದು ಸಿಕ್ಕ ಸಿಕ್ಕವರಿಗೆ ಹೊಡೆಯುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದವನಿಗೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಎಡೆ ಮುರಿ ಕಟ್ಟಿದ್ದಾರೆ. ಬೆಂಡಿಗೇರಿ ಮತ್ತು ರೇಲ್ವೆ ಪೊಲೀಸರಿಗೆ ಎರಡು ಮೂರು ಪ್ರಕರಣಗಳಲ್ಲಿ ಬೇಕಾಗಿದ್ದ ಖತರ್ನಾಕ್ ರೌಡಿ ವಿಜಯ ಹರಿಜನ ನನ್ನು ಕೊನೆಗೂ ಬೇಂಡಿಗೇರಿ ಪೊಲೀಸರು ಕೈಗೆ ಬೇಡಿ ಹಾಕಿ ಜೈಲಿಗಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ರೇಲ್ವೆ ಪೊಲೀಸ್ ಪೇದೆಯೋರ್ವರಿಗೆ ವಿಜಯ ಹರಿಜನ ಹೊಡೆದು ರಸ್ತೆ ಅವರನ್ನು ಆಸ್ಪತ್ರೆಗೆ ಸೇರುವಂತೆ ಮಾಡಿ ಪರಾರಿಯಾಗಿದ್ದನು. ಇದರೊಂದಿಗೆ ದಿನವಿಡಿ ಯಾವಾಗಲೂ ಕಂಠಪೂರ್ತಿ ಕುಡಿಯೊದು ಕುಡಿದು ಸಿಕ್ಕ ಸಿಕ್ಕವರಿಗೆ ಹೊಡೆಯುತ್ತಾ ಗಲಾಟೆ ಮಾಡುತ್ತಿದ್ದನು. ಇದರಿಂದ ಬೇಸತ್ತ ಸಾರ್ವಜನಿಕರು ಬೆಂಡಿಗೇರಿ ಪೊಲೀಸ್ ಠಾಣೆಗೆ ಸಾಕಷ್ಟು ದೂರುಗಳನ್ನು ವಿಜಯನ ಮೇಲೆ ನೀಡಿದ್ದರು.ಇತ್ತ ರೇಲ್ವೆ ಪೊಲೀಸರಿಗೂ ಒಂದೆರೆಡು ಪ್ರಕರಣಗಲ್ಲಿ ಬೇಕಾಗಿದ್ದು ಇತ್ತ ಬೆಂಡಿಗೇರಿ ಪೊಲೀಸರಿಗೂ ದೊಡ್ಡ ತಲೆನೋವಾಗಿದ್ದ ವಿಜಯನನ್ನು ಕೊನೆಗೂ ನಿನ್ನೇ ಬೆಂಡಿಗೇರಿ ಪೊಲೀಸರು ಹಗ್ಗ ಕಟ್ಟಿ ಪೊಲೀಸ್ ಠಾಣೆಗೆ ಎಳೆದುಕೊಂಡು ಬಂದಿದ್ದಾರೆ.

ತಮ್ಮೇಲ್ಲ ಕಾರ್ಯಗಳನ್ನು ಮುಗಿಸಿಕೊಂಡಿರುವ ಬೆಂಡಿಗೇರಿ ಪೊಲೀಸರು ರೇಲ್ವೆ ಪೊಲೀಸರಿಗೆ ರೌಡಿ ಶೀಟರ್ ವಿಜಯ ನನ್ನು ಒಪ್ಪಿಸಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆಗೆ ಇನಸ್ಪೇಕ್ಟರ್ ಆಗಿ ಅರುಣಕುಮಾರ ಸಾಳೊಂಕೆ ಬರುತ್ತಿದ್ದಂತೆ ರೌಡಿ ಶೀಟರ್ ವಿಜಯನ ಕಿರಿಕಿರಿ ಸಾರ್ವಜನಿಕರಿಂದ ಸಾಕಷ್ಟು ಪ್ರಮಾಣದಲ್ಲಿ ದೂರುಗಳು ಬಂದಿದ್ದರು. ಇದನ್ನೇಲ್ಲ ಅರಿತ ಇನಸ್ಪೇಕ್ಟರ್ ವಿಜಯನ ಮೇಲೆ ರೌಡಿ ಶೀಟರ್ ಕೇಸ್ ಓಪನ್ ಮಾಡಿದ್ದರು.ಒಂದೆರೆಡು ಪ್ರಕರಣಗಳಲ್ಲಿ ಬೇಕಾಗಿ ತಲೆ ಮರೆಸಿಕೊಂಡು ಸುತ್ತಾಡುತ್ತಿದ್ದ ವಿಜಯ್ ನಿಗೆ ಬೆಂಡಿಗೇರಿ ಇನಸ್ಪೇಕ್ಟರ್ ಮತ್ತು ಸಿಬ್ಬಂದಿಗಳು ಎಡೆ ಮುರಿ ಕಟ್ಟಿದ್ದಾರೆ. ಇನಸ್ಪೇಕ್ಟರ್ ಅರುಣಕುಮಾರ ಸಾಳೊಂಕೆ, ಎಎಸ್ ಐ ರಾಯಜಿ ,ಮುಖ್ಯ ಪೇದೆಗಳಾದ ಎ ಸಿ ರಜಪೂತ. ಪಿ ಎಸ್ ಕುಂದಗೋಳ ಎಸ್ ಎಮ್ ತಿರಕನ್ನವರ ,ವಿ ಪಿ ಬೋವಿ, ಎಮ್ ಡಿ ರಾಠೋಡ, ಪೊಲೀಸ್ ಸಿಬ್ಬಂದಿಗಳಾದ ಡಿ ಆರ್ ಪಮ್ಮಾರ ,ಸಿ ಕೆ ಲಮಾಣಿ, ಸೇರಿದಂತೆ ಹಲವು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ರೌಡಿ ಶೀಟರ್ ಗೆ ಬೇರೆ ದಾರಿ ತೋರಿಸಿದ್ದಾರೆ.