ಹುಬ್ಬಳ್ಳಿ –
DTTP ಯನ್ನೇ ಮರೆತರಾ..ಪಂಡಿತರಿಗೆ ಪ್ರಪಂಚ ಪಾಲಿಕೆಯ ಸದಸ್ಯರು ಸಾರ್ವಜನಿಕರಿಂದ ದೂರು ಬಂದರು DTTP ಗೆ ಭೇಟಿ ನೀಡದ ಆಯುಕ್ತರು…..DTTP ಯ ಪಂಡಿತರಿಗೆ ಹೇಳೊರಿಲ್ಲ ಕೇಳೊರಿಲ್ಲ ಎಲ್ಲದಕ್ಕೂ ದೊಡ್ಡವರ ಶ್ರೀರಕ್ಷೆ
ಸಾಮಾನ್ಯವಾಗಿ ಯಾವುದೇ ಇಲಾಖೆಯಲ್ಲಿ ದೂರು ಸಮಸ್ಯೆಗಳು ಮಾಧ್ಯಮಗಳಲ್ಲಿ ವರದಿ ಬಂದ ಕೂಡಲೇ ಸಂಬಂಧಿಸಿದ ಮೇಲಾಧಿಕಾರಿ ಗಳು ತಮ್ಮ ವ್ಯಾಪ್ತಿಯಲ್ಲಿನ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ.ಅಲ್ಲದೇ ಸಮಸ್ಯೆ ವರದಿಗಳ ಕುರಿತಂತೆ ಸಂಪೂರ್ಣವಾದ ಮಾಹಿತಿ ಯನ್ನು ಕೂಡಾ ಪಡೆದುಕೊಂಡು ರಿಪೈ ಮಾಡು ತ್ತಾರೆ ಹೀಗಿರುವಾಗ ಇತ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಏನು ನಡೆಯುತ್ತಿದೆ ಏನಾಗುತ್ತಿದೆ ಎಂಬೊದು ತಿಳಿಯುತ್ತಿಲ್ಲ
ಏನು ಹೇಳಿದರು ಅಷ್ಟೇ ಅದರಲ್ಲೂ ಪಾಲಿಕೆಯ ಲ್ಲಿನ DTTP ಯಲ್ಲಿನ ಸಮಸ್ಯೆ ಕುರಿತಂತೆ ಸಾರ್ವಜನಿಕರು ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಮಾಧ್ಯಮಗಳಲ್ಲೂ ಸರಣಿ ರೂಪ ದಲ್ಲಿ ವರದಿಗಳು ಬಂದರು ಆಯುಕ್ತರು ಮಾತ್ರ ನೋಡುತ್ತಿಲ್ಲ ಕೇಳುತ್ತಿಲ್ಲ ಹೀಗಿರುವಾಗ ತಾವೇ ಬಾಸ್ ಎಂದುಕೊಂಡಿರುವ ಪಂಡಿತರಿಗೆ ಲಂಗು ಲಗಾಮು ಇಲ್ಲದಂತಾಗಿದೆ.ಯಾರೇ ದೂರು ನೀಡಿದರು ಯಾರೇ ಏನೇ ಇಲ್ಲಿನ ಸಮಸ್ಯೆಗಳ ಕುರಿತಂತೆ ಹೇಳಿದರು ಕೇಳಿ ನೋಡಿ ಮರೆಯು ತ್ತಾರೆ ಮೇಲಾಧಿಕಾರಿಗಳು.ಇಲ್ಲಿನ ಅವ್ಯವಸ್ಥೆ ಕುರಿತಂತೆ ಪಾಲಿಕೆಯ ಸರ್ವ ಸದಸ್ಯರು ಸೇರಿ ದಂತೆ ಸಾರ್ವಜನಿಕರು ಕೂಡಾ ಬೇಸತ್ತಿದ್ದಾರೆ
ಹೀಗಿರುವಾಗ ಆಯುಕ್ತರು ಇದನ್ನು ಗಂಭೀರ ವಾಗಿ ತಗೆದುಕೊಳ್ಳುತ್ತಿಲ್ಲ ತಾವು ಮಾಡಿದ್ದೇ ಆಟ ತಾವು ಮಾಡಿದ್ದೇ ಕೆಲಸ ತಮ್ಮದೇ ಎಲ್ಲವೂ ತಾವೇ DTTP ಗೆ ಬಾಸ್ ಎಂದುಕೊಂಡು ಕೆಲಸ ಮಾಡುತ್ತಿರುವ ಪಂಡಿತರಿಗೆ ಹೇಳೊರಿಲ್ಲ ಕೇಳೊ ರಿಲ್ಲ ಇಲ್ಲದಂತಾಗಿದೆ.ಸರಳ ಸಜ್ಜನಿಕೆಯ ಅಧಿಕಾರಿಯಾಗಿರುವ ಪಾಲಿಕೆಯ ಆಯುಕ್ತರಿಗೆ ದಾರಿ ತಪ್ಪಿಸುವವರು ಇದ್ದಾರೆ ಹೀಗಾಗಿ ಪಂಡಿತರಿಗೆ ದೊಡ್ಡವರ ಶ್ರೀರಕ್ಷೆ ಕೂಡಾ ಇದೆ
ಹೀಗಾಗಿ ಏನು ಮಾಡಿದರು ನಡೆಯುತ್ತದೆ ಎಂದುಕೊಂಡಿರುವ ಇಲ್ಲಿನ ಆ ಇಬ್ಬರು ಪಂಡಿತರ ಪುರಾಣದ ಕಥೆ ದಾಖಲೆಯ ರೂಪದಲ್ಲಿ ಶೀಘ್ರ ದಲ್ಲೇ ನಿಮ್ಮ ಮುಂದೆ ನಿರೀಕ್ಷಿಸಿ……ಇನ್ನೂ ಪಾಲಿಕೆಯ ಸರ್ವ ಸದಸ್ಯರೇ ಇಲ್ಲಿ ಏನು ನಡೆಯುತ್ತಿದೆ ಇದನ್ನು ಯಾರು ಕಂಟ್ರೋಲ್ ಮಾಡುತ್ತಿದ್ದಾರೆ ಎಂಬೊದನ್ನು ಸೂಕ್ಷ್ಮವಾಗಿ ಗಮನಿಸಿ
ಇಲ್ಲಿನ ಬೇರೆ ಬೇರೆ ಕಿವಿ ಚುಚ್ಚುವ ಚಟುವಟಿಕೆಗ ಳಿಗೆ ಕಡಿವಾಣ ಹಾಕಿ ಇಲ್ಲವಾದರೆ ನಿಮ್ಮ ಬಗ್ಗೆಯೂ ಪಂಡಿತರು ಹೇಳಲು ಹಿಂದೆ ಮುಂದೆ ನೋಡೊದಿಲ್ಲ ನೋಡಿ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……