ಧಾರವಾಡ –
ಇಲ್ಲಿನ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಗೆ 2022 ರಿಂದ 2025 ರವರೆಗಿನ ಅವಧಿಗಾಗಿ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಇತ್ತೀಚೆಗೆ ನಡೆದ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.ಮಾರ್ಚ್ 16 ರಂದು ಜಿಲ್ಲಾಧಿಕಾ ರಿಗಳ ಕಚೇರಿ ಸಭಾಭವನದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾ ಯಿತು.

ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ,ಉಪಾಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಸುರೇಶ್ ಇಟ್ನಾಳ,ಚೇರಮನ್‍ರಾಗಿ ಮಹಾಂತೇಶ ಡಿ. ವೀರಾಪೂರ, ವೈಸ್‍ಚೇರಮನ್‍ರಾಗಿ ಬಿ. ಆರ್. ಸಾರಥಿ, ಗೌರವ ಖಜಾಂಚಿಯಾಗಿ ಡಾ.ಎಸ್.ಜಿ.ಹಿರೇಮಠ, ಸದಸ್ಯ ಕಾರ್ಯದರ್ಶಿಯಾಗಿ ಡಾ. ಉಮೇಶ ಹಳ್ಳಿಕೇರಿ, ರಾಜ್ಯ ಕಾರ್ಯ ನಿರ್ವಾಹಕ ಸಮಿತಿ ಸದಸ್ಯರಾಗಿ ಶಂಕರ ಮುಗದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಡಳಿತ ಮಂಡಳಿಯ ಸದಸ್ಯರುಗಳನ್ನಾಗಿ ಡಾ. ಕವನ್ ದೇಶಪಾಂಡೆ,ಆಯ್.ಎಸ್.ಗುಳಗಣ್ಣವರ, ಎ.ಎಲ್. ಗೊರೇಬಾಳ,ಮಲ್ಲಿಕಾರ್ಜುನ ಪಾಟೀಲ,ಡಾ.ಆರ್.ಎ. ಬಾಳಿಕಾಯಿ,ಡಾ.ಪ್ರಕಾಶ ಪವಾಡಶೆಟ್ಟರ, ಮಾರ್ತಾಂಡಪ್ಪ ಕತ್ತಿ,ಬಿ.ಆರ್.ಹೊಸಮನಿ,ಗೀತಾ ಎಸ್.ಮರಿಲಿಂಗಣ್ಣವರ ಆಯ್ಕೆಯಾಗಿದ್ದಾರೆ.ನೂತನ ಪದಾಧಿಕಾರಿಗಳಿಗೆ ಜಿಲ್ಲಾಧಿ ಕಾರಿ ನಿತೇಶ ಪಾಟೀಲ ಶುಭ ಕೋರಿದರು.