ವಿನಯ ಕುಲಕರ್ಣಿ ನಿವಾಸಕ್ಕೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

Suddi Sante Desk

ಧಾರವಾಡ –

ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಮ ಕುಲಕರ್ಣಿ ನಿವಾಸಕ್ಕೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು.

ಧಾರವಾಡ ಬಾರಾಕೂಟ್ರಿಯಲ್ಲಿರುವ ವಿನಯ ಕುಲಕರ್ಣಿ ನಿವಾಸಕ್ಕೇ ಸಿದ್ದರಾಮಯ್ಯ ಭೇಟಿ ನೀಡಿದರು. ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಸೇರಿದಂತೆ ಮೂವರು ಮಕ್ಕಳೊಂದಿಗೆ ಕೆಲ ಸಮಯ ಮಾತನಾಡಿ ಧೈರ್ಯ ಹೇಳಿದರು.

ಕೆಲ ಸಮಯ ವಿನಯ ಕುಲಕರ್ಣಿ ಅವರ ಕುಟುಂಬದವರೊಂದಿಗೆ ಮಾತನಾಡಿದ ನಂತರ ಸಿದ್ದರಾಮಯ್ಯ ಮಾತನಾಡಿ ಧೈರ್ಯ ಹೇಳಲು ಬಂದಿದ್ದೆ ಕಾರ್ಯಕರ್ತರೆಲ್ಲರೂ ಧೈರ್ಯವಾಗಿರಿ ನ್ಯಾಯ ಸಿಕ್ಕೇ ಸಿಗುತ್ತೆ ಅದು ಸಿಗುವವರೆಗೂ ನಾವೆಲ್ಲರೂ ಕಾಯೋಣಾ ಎಂದರು.

ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಅನೀಲ ಕುಮಾರ ಪಾಟೀಲ , ಶಾಸಕ ಪ್ರಸಾದ ಅಬ್ಬಯ್ಯ ,,ಅಲಿ ಗೋರವನಕೊಳ್ಳ ,ಸೇರಿದಂತೆ ಸ್ಥಳೀಯ ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.