ಹುಬ್ಬಳ್ಳಿ –
ಡ್ರಗ್ಸ್ ಕುರಿತಂತೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇನಸ್ಪೇಕ್ಟರ್ ಮುರಗೇಶ ಚನ್ನಣ್ಣನವರ ಮತ್ತು ಸದಾ ಅಮರಾಪುರ ಇವರ ಹಮ್ಮಿಕೊಂಡಿರುವ ದೊಡ್ಡ ಪ್ರಮಾಣ ದ ಸೈಕಲ್ ಜಾಗೃತಿಯ ಯಾತ್ರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇವರನ್ನು ಭೇಟಿಯಾದ ಸಿದ್ದರಾಮಯ್ಯ ನವರು ಸಮಾಜದಲ್ಲಿ ಅದರಲ್ಲೂ ದೇಶದಲ್ಲಿ ಇತ್ತೀಚಿಗೆ ಪೆಂಡಭೂತವಾಗಿ ಕಾಡುತ್ತಿರುವ ಡ್ರಗ್ಸ್ ಕುರಿತಂತೆ ಕಾಶ್ಮೀರದಿಂದ ಕನ್ಯಾಕುಮಾರಿ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಹೀಗಾಗಿ ಪೊಲೀಸ್ ಅಧಿಕಾರಿ ಮುರುಗೇಶ್ ಚೆನ್ನಣ್ಣನವರ್ ಹಾಗೂ ಆರ್ಡಿಪಿಆರ್ಡ್ ಇಲಾಖೆಯ ಸದಾ ಅಮರಾಪುರ ರವರ ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ 3800 ಕಿಲೋಮೀಟರ್ ಸೈಕಲ್ ಯಾತ್ರೆಗೆ ಶುಭಹಾರೈಸಿದರು
https://youtu.be/a1GIRPIcROo
ಅಲ್ಲದೇ ಪ್ರಯಾಣ ಸುಖಕರವಾಗಿರಲಿ ಇವರಿಂದ ಸಮಾಜಕ್ಕೆ ಒಳ್ಳೇಯ ಸಂದೇಶ ತಲುಪಲಿ ಎಂದರು. ಈ ಒಂದು ಸಮಯದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡ ಅಲಿ ಗೋರವನಕೊಳ್ಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇನ್ನೂ ಇತ್ತ ಹುಬ್ಬಳ್ಳಿಯಿಂದ ಇಬ್ಬರು ಸೈಕಲ್ ಯಾತ್ರಿಗಳಾದ ಪೊಲೀಸ್ ಅಧಿಕಾರಿ ಮುರಗೇಶ ಚನ್ನಣ್ಣನವರ ಮತ್ತು ಸದಾ ಅಮರಾಪೂರ ಪ್ರಯಾಣ ಬೆಳೆಸಿದರು ಕುಟುಂಬದವರು ಆಪ್ತರು ಹುಬ್ಬಳ್ಳಿಯ ವಿಮಾನ ನಿಲ್ದಾಣ ದಿಂದ ಶುಭ ಹಾರೈಸಿ ಕಳಿಸಿಕೊಟ್ಟರು
ಇನ್ನೂ ಇದೇ ವೇಳೆ ಹುಬ್ಬಳ್ಳಿಯ ವ್ಯಾಪಾರಿ ಮಂಜುನಾಥ ಹರ್ಲಾಪೂರ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸೇರಿದಂತೆ ಹಲವರು ಸನ್ಮಾನಿಸಿ ಗೌರವಿಸಿದರು ಜೊತೆಗೆ ಶುಭ ಹಾರಿಸಿದರು










