ಕಲಘಟಗಿ –
ಮಾಜಿ ಸಚಿವ ಸಂತೋಷ ಲಾಡ್ ಮತ್ತೊಂದು ಅಭಿಯಾನ ಆರಂಭ ಮಾಡಿದ್ದಾರೆ.ಅಧಿಕಾರ ಇಲ್ಲದಿದ್ದರೂ ಕೂಡಾ ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾರ್ಯಗಳನ್ನು ಮಾಡುತ್ತಾ ಕ್ಷೇತ್ರದಲ್ಲಿನ ಜನರಿಗೆ ನೆರವಾಗುತ್ತಿರುವ ಇವರು ಕರೋನಾ ಮಹಾಮಾರಿಯಿಂದ ತತ್ತರಿಸಿದ ಜನತೆಗೆ ಹಾಗೇ ಲಾಕ್ ಡೌನ್ ನಿಂದಾಗಿ ಬಡ ಮತ್ತು ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆಯಾಗಬಾರ ದೆಂಬ ಒಂದು ಕಾರಣಕ್ಕಾಗಿ

ಈಗಾಗಲೇ ಕ್ಷೇತ್ರದಲ್ಲಿನ 50 ಸಾವಿರ ಕುಟುಂಬಗಳಿಗೆ ಕಿಟ್ ಗಳನ್ನು ನೀಡಿರುವ ಮಾಜಿ ಸಚಿವ ಸಂತೋಷ ಲಾಡ್ ಈಗ ತಮ್ಮ ಕಾರ್ಯಗಳ ಕುರಿತಾದ ಮಾಹಿತಿ ಪಡೆದುಕೊಳ್ಲುವ ಉದ್ದೇಶದಿಂದಾಗಿ ಮಿಸ್ಡ್ ಕಾಲ್ ಕೊಡಿ ಎನ್ನುವ ಒಂದು ಅಭಿಯಾನವನ್ನು ಆರಂಭ ಮಾಡಿದ್ದಾರೆ. ಯುವ ಪಡೆಯೊಂದಿಗೆ ಕೈ ಜೋಡಿ ಸಲು ಈ ಒಂದು ಕಾರ್ಯವನ್ನು ಇವರು ಆರಂಭ ಮಾಡಿದ್ದು ಇದಿರಿಂದಾಗಿ ಇವರ ಕೆಲಸ ಕಾರ್ಯಗಳ ಕುರಿತಂತೆ ಎಲ್ಲಾ ಸಮಗ್ರವಾದ ಮಾಹಿತಿಯನ್ನು ಪಡೆಯಲು ಈ ಒಂದು ಅಭಿಯಾನ ಅನುಕೂಲಕರ ವಾಗಲಿದೆ.

ಮಾಜಿ ಸಚಿವರ ಐಟಿ ವಿಭಾಗದಿಂದ ಈ ಒಂದು ಕಾರ್ಯವನ್ನು ಆರಂಭ ಮಾಡಲಾಗಿದೆ.ಇನ್ನೂ ಇದೇ ವೇಳೆ ಮಾಜಿ ಸಚಿವ ಸಂತೋಷ ಲಾಡ್ ಸುದ್ದಿ ಸಂತೆ ಯೊಂದಿಗೆ ಮಾತನಾಡಿ ನಾವು ಮಾಡಿದ ಕೆಲಸ ಕಾರ್ಯಗಳನ್ನು ಜನರಿಗೆ ತಲುಪಿಸುವ ಪ್ರಮುಖ ಕಾರ್ಯದಿಂದ ಮಾಹಿತಿ ಮುಟ್ಟಿಸುವ ಉದ್ದೇಶದಿಂದ ಇದನ್ನು ಆರಂಭ ಮಾಡಲಾಗಿದೆ ಎಂದರು