ಹುಟ್ಟಿದ ದಿನದಂದೇ ನಿಧನರಾದ ಮಾಜಿ ಸಚಿವ ಎಸ್ ಆರ್ ಮೋರೆ

Suddi Sante Desk

ಧಾರವಾಡ –

ಮಾಜಿ ಸಚಿವ ಎಸ್ ಆರ್ ಮೋರೆ ಇನ್ನೂ ನೆನಪು ಮಾತ್ರ ಮರೆಯಾದ ಧಾರವಾಡದ ಆಶ್ರಯ ಯೋಜನೆ ಹರಿಕಾರ, ಬಡವರ ಬಂಧು ನಾಯಕ ಹುಟ್ಟಿದ ದಿನದಂದೇ ನಿಧನ

ಧಾರವಾಡದ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಮಾಜಿ ಸಚಿವ ಬಡವರ ಬಂಧು ಆಶ್ರಯ ಮನೆಗಳ ಹರಿಕಾರ ಎಸ್ ಆರ್ ಮೋರೆ ನಿಧನರಾಗಿದ್ದಾರೆ.ಹೌದು ನಿನ್ನೆ ರಾತ್ರಿ ಅನಾ ರೋಗ್ಯ ಹಿನ್ನಲೆಯಲ್ಲಿ ಎಸ್ ಡಿ ಎಮ್ ಆಸ್ಪತ್ರೆಗೆ ದಾಖಲಾ ಗಿದ್ದ ಇವರು ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಬಾರಿ ಕಾಂಗ್ರೇಸ್ ಪಕ್ಷದಿಂದ ಶಾಸಕರಾಗಿ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಧರ್ಮಸಿಂಗ್ ಅವಧಿಯಲ್ಲಿ ಎರಡು ಬಾರಿ ಸಚಿವರಾಗಿ ಅಧಿಕಾರವನ್ನು ಮಾಡಿದ್ದರು. ಇನ್ನೂ ಅಧಿಕಾರದ ಅವಧಿ ಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನಪ್ರೀಯ ಕೆಲಸ ಕಾರ್ಯಗಳನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಅದರಲ್ಲೂ ಆಶ್ರಯ ಮನೆಗಳನ್ನು ಸಾಕಷ್ಚು ಪ್ರಮಾಣದಲ್ಲಿ ನಿರ್ಮಾಣ ಮಾಡಿ ಈ ಹಿಂದೆ ಅವಳಿ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಏಳು ದಿನಗಳಿಗೊಮ್ಮೆ ಕುಡಿಯುವ ನೀರು ಬರುತ್ತಿತ್ತು ಮೂರು ದಿನಗಳಿಗೊಮ್ಮೆ ಬರುವ ಹಾಗೇ ಮಾಡಿದರು.ಹಾಗೇ ಇದರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಜನಪರ ಯೋಜನೆಗಳನ್ನು ಮಾಡಿ ದ ಕೀರ್ತಿ ಇವರಿಗೆ ಸಲ್ಲುತ್ತದೆ ಬಡವರ ಬಂಧು ಎಂದೇ ಹೆಸರಾದ ಇವರು 84ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅಗಲಿಕೆಯಿಂದಾಗಿ ಜಿಲ್ಲೆಯ ಕ್ಷೇತ್ರದ ಪಕ್ಷದ ನಾಯಕರು ಮುಖಂಡರು ಸಂತಾಪವನ್ನು ಸೂಚಿಸಿದ್ದಾರೆ.ಕೇಂದ್ರ ಸಚಿವ ರಾದ ಪ್ರಹ್ಲಾದ್ ಜೋಶಿ,ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ,ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ,ಮಾಜಿ ಸಚಿವರಾದ ಸಂತೋಷ ಲಾಡ್,ವಿನಯ ಕುಲಕರ್ಣಿ,ಹೊಟೇಲ್ ಉಧ್ಯಮಿ ಮಹೇಶ್ ಶೆಟ್ಟಿ,ನಾಗರಾಜ ಛಬ್ಬಿ,ಈಶ್ವರ ಶಿವಳ್ಳಿ,ಹೇಮಂತ ಗುರ್ಲಹೊಸೂರ,ಆನಂದ ಜಾಧವ,ಅಜಿತ ಬೋಗಾರ, ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿ ಭಾವ ಪೂರ್ಣ ನಮನವನ್ನು ಸಲ್ಲಿಸಿದ್ದಾರೆ.ಇಂದು ಸಂಜೆ ನಾಲ್ಕು ಗಂಟೆಗೆ ಧಾರವಾಡದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಇನ್ನೂ ಹುಟ್ಟಿದ ದಿನದಂದೇ ಇಹಲೋಕ ತ್ಯಜಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.