ಧಾರವಾಡ –
ಮಾಜಿ ಸಚಿವ ವಿನಯ ಕುಲಕರ್ಣಿ ಮಾವ ಗಂಗಪ್ಪ ಶಿಂತ್ರಿ ನಿಧನರಾಗಿದ್ದು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.ಇಂದು ಬೆಳಿಗ್ಗೆ ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿಯ ತಂದೆ ಗಂಗಪ್ಪ ಶಿಂತ್ರಿ ಸವದತ್ತಿಯ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.
ಇವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿನಯ ಕುಲಕರ್ಣಿ ಪರ ವಕೀಲರು ಮತ್ತು ಕುಟುಂಬದವರು ನ್ಯಾಯಾಲಾಯಕ್ಕೆ ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಾಧೀಶರು ವಿನಯ ಕುಲಕರ್ಣಿ ಅವರಿಗೆ ಕೆಲ ನಿಮಯಗಳನ್ನು ಸೂಚಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ. ನ್ಯಾಯಾಧೀಶರಾದ ಎಮ್ ಗಂಗಾಧರ ಅವರು ಆದೇಶ ನೀಡಿ ಅನುಮತಿ ನೀಡಿದ್ದಾರೆ.
ಮಧ್ಯಾಹ್ನ 3 30 ರಿಂದ 6 30 ರವರೆಗೆ ಅಂತ್ಯಕ್ರಿಯೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಕೂಡಲೇ ಬೆಳಗಾವಿಯ ಹಿಂಡಲಗಾ ಜೈಲಿಗೆ ಮರಳುವಂತೆ ಸೂಚಿಸಿ ಆದೇಶವನ್ನು ನೀಡಿದ್ದಾರೆ. ಇನ್ನೂ ವಿನಯ ಕುಲಕರ್ಣಿ ಸಧ್ಯ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿದ್ದು ಅಲ್ಲಿಂದ ಸವದತ್ತಿಯಲ್ಲಿ ನಡೆಯುವ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮರಳಿ ಕರೆದುಕೊಂಡು ಕಾರಾಗೃಹಕ್ಕೆ ಮರಳಿ ಕರೆದುಕೊಂಡು ಹೋಗಲು ಒಂದು ಎಸ್ಕಾರ್ಟ್ ವ್ಯವಸ್ಥೆಯನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಡಿದ್ದಾರೆ. ಸವದತ್ತಿಯಲ್ಲಿ ಗಂಗಪ್ಪ ಶಿಂತ್ರಿ ಅವರ ಯಂಡ್ರಾವಿ ತೋಟದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಗಂಗಪ್ಪ ಶಿಂತ್ರಿ ಧಾರವಾಡದ ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ಕುಸಿತದ ಪ್ರಕರಣದ ಮೊದಲನೇಯ ಆರೋಪಿಯಾಗಿ ಸಧ್ಯ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಇವತ್ತು ಬೆಳಗಿನ ಜಾವ ಸವದತ್ತಿಯ ಅವರ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.