ಹುಬ್ಬಳ್ಳಿ –
ನಾಳೆ ಹುಬ್ಬಳ್ಳಿಯಲ್ಲಿ ಕಾಂಗ್ರೇಸ್ ಪಕ್ಷದ ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಗೋಕುಲ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ನಲ್ಲಿ ಕಾರ್ಯಕ್ರಮವನ್ನುಆಯೋಜಿಸಲಾಗಿದೆ.ಈಗಾಗಲೇ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ನಾಯಕರು ನಗರಕ್ಕೆ ಬಂದಿದ್ದಾರೆ.ಇವೆಲ್ಲದರ ನಡುವೆ ಸಮಾವೇಶಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ಭಿತ್ತಿ ಪತ್ರಗಳನ್ನು ಮಾಡಿಸಿದ್ದು ಪತ್ರದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರ ಪೊಟೊ ಗಳನ್ನು ಹಾಕಲಾಗಿದೆ. ಆದರೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಪಕ್ಷದ ನಾಯಕರು ಮರೆತಂತೆ ಕಾಣುತ್ತಿದೆ.
ಹೌದು ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶ ಭಿತ್ತಿ ಪತ್ರದಲ್ಲೂ ವಿನಯ ಕುಲಕರ್ಣಿ ಅವರನ್ನು ಮರೆತಿದ್ದಾರೆ. ಬ್ಯಾನರ್ ನಲ್ಲಿ ಆಗಲಿ ಇಲ್ಲವೇ ಭಿತ್ತಿ ಪತ್ರದಲ್ಲಿಯೂ ಅವರನ್ನು ಬಿಟ್ಟು ಎಲ್ಲಾ ನಾಯಕರ ಪೊಟೊ ಹಾಕಲಾಗಿದೆ.
ರಾಜ್ಯ ಕೆಪಿಸಿಸಿ ಘಟಕದಿಂದಲೂ ಮತ್ತು ಸ್ಥಳೀಯ ನಾಯಕರು ಹೀಗೆ ಬೇರೆ ಬೇರೆಯಾಗಿ ಮುದ್ರಣ ಮಾಡಿದ್ದು ಯಾರೊಬ್ಬರೂ ಕೂಡಾ ವಿನಯ ಕುಲಕರ್ಣಿ ಅವರ ಪೊಟೊ ಹಾಕಿಲ್ಲ. ಸಧ್ಯ ಮಾಜಿ ಸಚಿವ ವಿನಯ ಕುಲಕರ್ಣಿ ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಜೈಲಿನಲ್ಲಿದ್ದಾರೆ ಎಂದುಕೊಂಡು ಕಾಂಗ್ರೆಸ್ ಪಕ್ಷದವರು ಅವರ ಪೊಟೊ ಬಳಸಿಲ್ಲವಂತೆ ಕಾಣುತ್ತಿದೆ.
ಇನ್ನೂ ವಿನಯ ಕುಲಕರ್ಣಿ ಅವರ ಪೊಟೊ ಹಾಕದಿರುವುದಕ್ಕೆ ಧಾರವಾಡದ 71ನೇ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮತ್ತು ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.ಅಲ್ಲದೇ ನಾಳೆಯ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ. ಏನೇ ಆಗಲಿ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲಿನಲ್ಲಿದ್ದರು ಪೊಟೊ ದಲ್ಲಾದರೂ ಅವರನ್ನು ಹಾಕುವ ಬದಲಿಗೆ ಮರೆತಿದ್ದು ದುರ್ದೈವದ ಸಂಗತಿ.