ಧಾರವಾಡ ದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಹುಟ್ಟು ಹಬ್ಬ ಆಚರಣೆ – ಅಭಿಮಾನಿ ಬಳಗ ದಿಂದ ರಕ್ತದಾನ, ಅನ್ನಸಂತರ್ಪಣೆ

Suddi Sante Desk

ಧಾರವಾಡ –

ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹುಟ್ಟು ಹಬ್ಬ ವನ್ನು ಧಾರವಾಡ ದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಸಧ್ಯ ಅವರು ಬೆಂಗಳೂರಿನಲ್ಲಿ ಇದ್ದು ನಗರದಲ್ಲಿ ಇರದಿದ್ದರೂ ಕೂಡಾ ಪ್ರತಿ ವರ್ಷ ದಂತೆ ವಿನಯ ಕುಲಕರ್ಣಿ ಅಭಿಮಾನಿ ಬಳಗ ದಿಂದ ಆಚರಣೆ ಮಾಡ ಲಾಯಿತು

ಹೌದು ವಿನಯ ಕುಲಕರ್ಣಿ ಅಭಿಮಾನಿ ಬಳಗದ ವತಿ ಯಿಂದ ಹುಟ್ಟು ಹಬ್ಬದ ಅಂಗವಾಗಿ ರಕ್ತ ದಾನ ಹಾಗೂ ಅನ್ನಸಂತರ್ಪಣಿ ಮಾಡಲಾಯಿತು ಈ ರಕ್ತ ದಾನ ಶಿಬಿರ ದಲ್ಲಿ ಕಾರ್ಯಕ್ರಮದಲ್ಲಿ ನೂರಾರು ಜನರು ರಕ್ತ ದಾನ ಮಾಡಿದರು

ಇದರೊಂದಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಯಿತು. ರಕ್ತ ದಾನ ಮಾಡಿ ಮತ್ತು ಅನ್ನಪ್ರಸಾದ ಕಾರ್ಯಕ್ರಮ ವನ್ನು ಲಾಯನ್ಸ್ ಹೇಲ್ತ್ ಕ್ಲಬ್ ನ ಎಲ್ಲಾ ವಿಧ್ಯಾರ್ಥಿಗಳಿಗೆ ಮತ್ತು ಎಲ್ಲಾ ಗೆಳೆಯರಿಗೆ ಹಾಗೂ ಅಭಿಮಾನಿ ಬಳಗದ ಅಭಿಮಾನಿಗಳು ಪಾಲ್ಗೊಂಡಿದ್ದರು.ಇನ್ನೂ ಈ ಒಂದು ಸಂದರ್ಭದಲ್ಲಿ ವಿನಯ ಕುಲಕರ್ಣಿ ಅಭಿಮಾನಿ ಬಳಗದ ಬಸವರಾಜ ಜಾಧವ,ಶಿವಶಂಕರ ಹಂಪಣ್ಣನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.