ಧಾರವಾಡ –
ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮತ್ತೊಬ್ಬರಿಗೆ ನ್ಯಾಯಾಂಗ ಬಂಧನವಾಗಿದೆ.ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಪೊಲೀಸರಿಂದ ಬಂಧಸಲ್ಪಟ್ಟಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರಿಗೂ ನ್ಯಾಯಾಂಗ ಬಂಧನವಾಗಿದೆ.
ಧಾರವಾಡದ ಮೂರನೇ ಜಿಲ್ಲಾ ಹಾಗೂ ಸತ್ರ ಹಾಗೂ ಸಿಬಿಐ ವಿಶೇಷ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನದ ಆದೇಶ ನೀಡಿದ್ದಾರೆ.
ಡಿ.28ರ ವರೆಗೆ ಚಂದ್ರಶೇಖರ ಇಂಡಿ ಅವರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದ್ದು ನಾಳೆ ಸಿಬಿಐ ಕಸ್ಟಡಿಗೆ ಕೊಡುವ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಲಿದೆ.
ಹೆಚ್ಚಿನ ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳು ಎರಡು ದಿನ ಇಂಡಿ ಅವರನ್ನು ತಮ್ಮ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಇದಕ್ಕೆ ಇಂಡಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಈಗಾಗಲೇ ಆರೋಪಿತರನ್ನು ಹಲವು ಬಾರಿ ವಿಚಾರಣೆ ಮಾಡಲಾಗಿದೆ. ಈಗ ಮತ್ತೆ ವಶಕ್ಕೆ ಕೇಳುತ್ತಿರುವುದು ಸರಿಯಲ್ಲ ಎಂದು ಪ್ರತಿವಾದ ಮಂಡಿಸಿದರು.
ಇದಕ್ಕೆ ಸಿಬಿಐ ಪರ ವಕೀಲರು ಇನ್ನೂ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ. ಇಲ್ಲಿಯವರೆಗೆ ಅವರನ್ನು ಕೇವಲ ಪ್ರಾಥಮಿಕವಾಗಿ ವಿಚಾರಣೆ ಮಾಡಲಾಗಿದೆ. ಇನ್ನೂ ಅವರಿಂದ ಅಗತ್ಯ ಮಾಹಿತಿ ಕಲೆ ಹಾಕಬೇಕಾಗಿದೆ. ಹೀಗಾಗಿ ಅವರನ್ನು ಕಸ್ಟಡಿಗೆ ಕೊಡಬೇಕು ಎಂದು ಮನವಿ ಮಾಡಿದರು.ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ,
ಇಂಡಿ ಪರ ವಕೀಲರಿಗೆ ನಾಳೆ ತಕರಾರು ಸಲ್ಲಿಸಲು ತಿಳಿಸಿ, ಆರೋಪಿಯನ್ನು 14 ದಿನ ಕಾಲ ಡಿಸೆಂಬರ್ 28 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದರು.ಇನ್ನೂ ನ್ಯಾಯಾಂಗ ಬಂಧನವಾಗುತ್ತಿದ್ದಂತೆ ಚಂದ್ರಶೇಖರ್ ಇಂಡಿ ಅವರನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೇ ಶಿಪ್ಟ್ ಮಾಡಲಾಯಿತು.