ಧಾರವಾಡ –
KMF ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಅಭಿನಂದಿಸಿದ ಶಾಸಕ ಅರವಿಂದ ಬೆಲ್ಲದ – ಶಾಸಕರಿಗೆ ಸಾಥ್ ನೀಡಿದ ಮಾಜಿ ಶಾಸಕ ಅಮೃತ ದೇಸಾಯಿ
ತೀವ್ರ ಕುತುಹೂಲ ಕೆರಳಿಸಿದ್ದ ಧಾರವಾಡ ಹಾಲು ಒಕ್ಕೂಟವನ್ನು ಬಿಜೆಪಿ ಪಕ್ಷವು ಮತ್ತೆ ತನ್ನ ತೆಕ್ಕೆಗಿ ಹಾಕಿಕೊಂಡಿದೆ.ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಯ ಶಂಕರ ಮುಗದ ಅಧ್ಯಕ್ಷರಾಗಿ ಆಯ್ಕೆಯಾಗಿ ದ್ದಾರೆ.ಮೂರನೇಯ ಬಾರಿಗೆ ಘಟಕಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಇತ್ತ ನೂತನ ಅಧ್ಯಕ್ಷರನ್ನು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಒಕ್ಕೂಟದ ಕಚೇರಿಯಲ್ಲಿ ಅಧ್ಯಕ್ಷ ಶಂಕರ ಮುಗದ ಅವರನ್ನು ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು.
ಚುನಾವಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನಂತರ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ನೂತನ ಅಧ್ಯಕ್ಷ ರನ್ನು ಅಭಿನಂದಿಸಿ ಗೌರವಿಸಿ ಶುಭವನ್ನು ಹಾರೈಸಿದರು ಈ ಒಂದು ಸಮಯದಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..