ಕಲಘಟಗಿ –
ಕಲಘಟಗಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಗುರು ಜೇಕಬ್ ನಿಧನರಾಗಿದ್ದಾರೆ. ಕಲಘಟಗಿಯ
ತುಮರಿಕೊಪ್ಪ ಹೈಸ್ಕೂಲಿನ ಸಂಸ್ಥಾಪಕರು, ಕಲಘಟಗಿ ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿ ಮೂಡಿಸಿದ ಹರಿಕಾರ,ಬಡವರ ಬಂಧು,ಜನ ಸಾಮಾನ್ಯರ ಪಾಲಿನ ಕುಬೇರ,ಕಲಘಟಗಿ ತಾಲೂಕಾ ಅಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷರು ತಮ್ಮ ಸಂಸ್ಥೆ ಯಿಂದ ರಸ್ತೆ,ಮನೆಗಳನ್ನು ನಿರ್ಮಿಸಿ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಸಾಕಾರಗೊಳಿಸಿದ ಸಾತ್ವಿಕ, ಪ್ರಾಮಾಣಿಕ ರಾಜಕಾರಿಣಿ ಎಂದೇ ಹೆಸರಾಗಿದ್ದರು.

ತಾಲೂಕಿನ ಮಾಜಿ ಶಾಸಕರು ಅನೇಕರಿಗೆ ಬದುಕು ಕಟ್ಟಿಕೊಟ್ಟ ಸಹೃದಯಿಗಳು,ಬೆಣಚಿಕೆರೆ ನಿರ್ಮಿಸಿ ಪಟ್ಟಣಕ್ಕೆ ಕುಡಿಯುವ ನೀರು ದೊರಕುವಂತೆ ಮಾಡಿದ ಸೃಷ್ಟಿ ಪುರುಷ,ಪರಮಪೂಜ್ಯ,ರೆ.ಫಾದರ್ ಪಿ.ಜೆ.ಜಾಕೋಬರವರು ತಮ್ಮ 90 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಇನ್ನೂ ಇವರ ನಿಧನಕ್ಕೆ ಜಿಲ್ಲೆಯ ರಾಜಕೀಯ ನಾಯಕರು ಸಂತಾಪ ಸೂಚಿ ಸಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ ಅರವಿಂದ ಬೆಲ್ಲದ, ಪ್ರಸಾದ್ ಅಬ್ಬಯ್ಯ,ಶಂಕರ ಪಾಟೀಲ ಮುನೇನಕೊಪ್ಪ,ಸಿ ಎಮ್ ನಿಂಬಣ್ಣವರ ಮಾಜಿ ಸಚಿವ ಸಂತೋಷ ಲಾಡ್,ಸೇರಿದಂತೆ ಹಲವು ಗಣ್ಯರು ಅಗಲಿದ ಮಾಜಿ ಶಾಸಕರಿಗೆ ಸಂತಾಪ ಸೂಚಿಸಿದ್ದಾರೆ