ಧಾರವಾಡ –
ಧಾರವಾಡ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಈಗ ಆಶಾ ಕಾರ್ಯಕರ್ತೆಯಾಗಿ ಜನಸೇವೆಗೆ ನಿಂತ ರಾಜಕೀಯ ನಾಯಕಿಯಾಗಿದ್ದಾರೆ. ಹೌದು ಧಾರವಾ ಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಆಶಾ ಕಾರ್ಯ ಕರ್ತೆ ಸುಮಂಗಲಾ ಕೌದೆಣ್ಣವರ ತನ್ನ ಅಧಿಕಾರ ಅವಧಿ ಮುಗಿದ ತಕ್ಷಣ ಸುಮ್ಮನೆ ಮನೆಯಲ್ಲಿ ಕೈ ಕಟ್ಟಿ ಕುಳಿತುಕೊಳ್ಳದೆ ಮತ್ತೆ ಜನಸೇವೆಗೆ ಆಯ್ಕೆ ಮಾಡಿ ಕೊಂಡ ಕ್ಷೇತ್ರ ಅದು ಗ್ರಾಮದ ಜನರ ಅದರ ಲ್ಲೂ ಮಹಿಳೆಯರ ಸೇವೆಗಾಗಿ ಆಶಾ ಕಾರ್ಯಕರ್ತೆ ಹುದ್ದೆಯನ್ನು ತೆಗೆದುಕೊಂಡು ಸದ್ಯ ವ್ಯಾಪಕ ವಾಗಿ ಹರಡುತ್ತಿರುವ ಕರೋನ ಸಾಂಕ್ರಾಮಿಕ ರೋಗದ ಕುರಿತು ಗ್ರಾಮದ ಜನರಲ್ಲಿ ತಿಳುವಳಿಕೆಯನ್ನು ಮೂಡಿಸುತ್ತಿದ್ದಾರೆ.
ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಸದುಪ ಯೋಗ ಪಡೆಯುವಂತೆ ಮತ್ತು ಪ್ರಾಥಮಿಕ ಆರೋ ಗ್ಯ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿ ಹೇಳುವುದರ ಜೊತೆಗೆ ಕರೋನದ ಲಕ್ಷಣಗಳು ಮತ್ತು ಆ ರೋಗದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಹಾಕುವುದು ಸಾಮಾಜಿಕ ಅಂತರ ಕಾಪಾಡುವುದು ಸ್ವಚ್ಚತೆಯ ಕುರಿತು ಮಾಹಿತಿ ನೀಡುತ್ತಿದ್ದಾರೆ
ಗ್ರಾಮದ ತಮಗೆ ವಹಿಸಿದ ಎಲ್ಲಾ ಮನೆಗಳಿಗೆ ಹೋಗಿ ಇದೊಂದು ಸೇವೆ ಅಂತ ತಿಳಿದು ಈ ಕಾರ್ಯವನ್ನು ಅವರು ಮಾಡುತ್ತಿದ್ದಾರೆ ಅವರಿಗೆ ಸಂಪೂರ್ಣ ಕೈಜೋಡಿಸಿದವರು ಅಂಗನವಾಡಿ ಕಾರ್ಯಕರ್ತೆ ಸುಶೀಲಾ ಶಿರಗುಪ್ಪಿ ಇವರು ಮಾಡು ತ್ತಿರುವ ಕಾರ್ಯವನ್ನು
ಇನ್ನೂ ಇವರ ಕಾರ್ಯವನ್ನು ಗ್ರಾಮದ ಗ್ರಾಮ ಪಂಚಾಯತಿ ಅದ್ಯಕ್ಷೆ ತೇಜಸ್ವಿನಿ ತಲವಾಯಿ ಉಪಾ ದ್ಯಕ್ಷ ವಿಠ್ಠಲ ಇಂಗಳೆ ಎಲ್ಲಾ ಸದಸ್ಯರುಗಳು ಪಿಡಿಒ ಬಿ ಡಿ ಚೌರಡ್ಡಿ ಗಣ್ಯರಾದ ತಮ್ಮಾಜಿರಾವ ತಲವಾ ಯಿ,ಪ್ರಕಾಶ ಕುಂಬಾರ ಸಂಜು ಮೊರಬದ, ಇಮಾ ಮಸಾಬ ಮ ಗುಡಸಲಮನಿ ಸೇರಿದಂತೆ ಧಾರವಾಡ ದ ಅಕ್ಷರತಾಯಿ ಲೂಸಿ ಸಾಲ್ಡಾನ ಸಂಸ್ಥೆಯ ಗೌರ ವಾಧ್ಯಕ್ಷರಾದ ಭೀಮಪ್ಪ ಕಾಸಾಯಿ ಅಜೀತಸಿಂಗ ರಜಪೂತ, ಎಲ್ ಐ ಲಕ್ಕಮ್ಮನವರ ಮಂಜುನಾಥ ವಾಸಂಬಿ, ತಡಕೋಡದ ಈರಣ್ಣ ಬಾರಿಕೇರ ಸೇರಿ ದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ