ಬೆಳಗಾವಿ –
ಕೆಎಸ್ ಆರ್ಟಿಸಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ಕು ಜನ ಸಾವಿಗೀಡಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚಚಡಿ – ಗೋಂತಮಾರ ಕ್ರಾಸ್ ಬಳಿ ಈ ಒಂದು ಭೀಕರ ಅಪಘಾತವಾಗಿದೆ. ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಮುಖಾ ಮುಖಿ ಡಿಕ್ಕಿಯಾಗಿದೆ.

ಘಟನೆಯಲ್ಲಿ ಬೆಳಗಾವಿ ನಗರದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿಯಿಂದ ಇಲಕಲ್ಲ್ ಕಡೆಗೆ ಬಸ್ ಹೊರಟಿತ್ತು ಇನ್ನೂ ಬೆಳಗಾವಿಯತ್ತ ಕಾರು ಹೊರಟಿತ್ತು.

ಚಚಡಿ ಕ್ರಾಸ್ ಬಳಿ ಈ ಒಂದು ಅಪಘಾತವಾಗಿದೆ. ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾದ ಕಾರಣ ಕಾರು ಬಸ್ಸಿನ ಕೆಳಗೆ ಜಿಬ್ಬಿಯಾಗಿ ಒಳಗೆ ಹೋಗಿದ್ದು ಹೀಗಾಗಿ ಸ್ಥಳದಲ್ಲೇ ನಾಲ್ಕು ಜನ ಸಾವಿಗೀಡಾಗಿದ್ದಾರೆ.

ಇನ್ನೂ ವಿಷಯ ತಿಳಿದ ಕೂಡಲೇ ತಕ್ಷಣ ಮುರುಗೋಡ ಪೋಲೀಸರು ಸ್ಥಳಕ್ಕೇ ಆಗಮಿಸಿ ಕ್ರೇನ್ ತರಿಸಿ ಬಸ್ಸಿನಿಂದ ಕಾರನ್ನು ಬೇರ್ಪಡಿಸಿದ ಬಳಿಕ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ವಿಷಯ ಗೊತ್ತಾಯಿತು.

ಇನ್ನೂ ಬೆಳಗಾವಿಯ ಸಹ್ಯಾದ್ರಿ ನಗರದ ನಿವಾಸಿಗಳಾದ ಶ್ರೀಮತಿ ಲಕ್ಷ್ಮೀ ಹನವಂತರಾವ್ ಪವಾರ,ಇವರು ಸಧ್ಯ ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ WPSI ಆಗಿದ್ದಾರೆ. ಇನ್ನೂ ಇವರೊಂದಿಗೆ ಇವರ ಮಗನಾದ ಪ್ರಸಾದ , ಅಂಕಿತಾ ,ಮತ್ತು ದೀಪಾ ಅನಿಲ ಶಹಾಪೂರಕರ ಹೀಗೆ ನಾಲ್ಕು ಜನ ಸ್ಥಳದಲ್ಲೇ ಸಾವಿಗೀಡಾಗಿದ ಮೃತ ದುರ್ದೈವಿಗಳಾಗಿದ್ದಾರೆ.

ಇನ್ನೂ ಭೀಕರವಾದ ಈ ರಸ್ತೆ ಅಪಘಾತದಲ್ಲಿ ಈ ನಾಲ್ವರು ಮೃತಪಟ್ಟಿದ್ದು ಈ ಕುರಿತಂತೆ ಮುರಗೋಡ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಮೊನ್ನೆಯಷ್ಟೇ ಮಗನ ಮದುವೆಯನ್ನು ಮುಗಿಸಿಕೊಂಡು ಇಂದು ದೇವಸ್ಥಾನಕ್ಕೆಂದು ಮಹಿಳಾ ಪೊಲೀಸ್ ಅಧಿಕಾರಿ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಹೋಗಿ ಪೂಜೆ ದರ್ಶನ ಹೀಗೆ ಎಲ್ಲವನ್ನೂ ಮುಗಿಸಿಕೊಂಡು ಮರಳಿ ಬೆಳಗಾವಿಯತ್ತ ಹೊರಟಿದ್ದ ಸಮಯದಲ್ಲಿ ಈ ಒಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ದೇವಸ್ಥಾನಕ್ಕೆ ಹೊರಟು ಮರಳಿ ಮನೆಯತ್ತ ಹೊರಟವರು ಧಾರುಣ ರಸ್ತೆ ಅಪಘಾತಕ್ಕೆ ಇಡಿ ಕುಟುಂಬದವರೇ ಬಲಿಯಾಗಿದ್ದು ದುರ್ದೈವದ ಸಂಗತಿಯಾಗಿದೆ.

ಇನ್ನೂ ದಾರಿಯಲ್ಲಿ ಹೊರಟಿದ್ದ ಸಚಿವ ಮುರಗೇಶ ನಿರಾಣಿ ಅಪಘಾತ ಸ್ಥಳದಲ್ಲೇ ಕೆಲ ಸಮಯ ನಿಂತುಕೊಂಡು ಪರಿಶೀಲನೆ ಮಾಡಿ ತೆರಳಿದರು.