ಬೆಂಗಳೂರು –
ಫೆಬ್ರವರಿ 1 ರಿಂದ ರಾಜ್ಯದಲ್ಲಿ ಒಂಬತ್ತು ಮತ್ತು ಹತ್ತನೆಯ ತರಗತಿಗಳನ್ನು ಆರಂಭ ಮಾಡಲು ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು ಮಾರ್ಗಸೂಚಿ ಯೊಂದಿಗೆ ಸುತ್ತೊಲೆಯನ್ನು ಬಿಡುಗಡೆ ಮಾಡಿದೆ.

ರಾಜ್ಯದಲ್ಲಿನ ಅನುದಾನಿತ ಅನುದಾನ ರಹಿತ ಎಲ್ಲಾ ಸರ್ಕಾರಿ ಪ್ರೌಢ ಶಾಲೆ ಗಳಲ್ಲಿನ 9,10 ವರ್ಗಗಳನ್ನು ಆರಂಭ ಮಾಡಲು ಸೂಚನೆ ನೀಡಿದೆ.ಅಲ್ಲದೇ ಕೆಲ ಮಾರ್ಗಸೂಚಿಗಳನ್ನು ಸೂಚಿಸಿದೆ.

ಉಳಿದಂತೆ ಇನ್ನೂ ಕೆಲ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುತ್ತೊಲೆಗಳಲ್ಲಿ ಉಲ್ಲೇಖ ಮಾಡಿ ಶಿಕ್ಷಣ ಇಲಾಖೆ ಹೊಸದಾದ ಆದೇಶ ಹೊರಡಿಸಿದೆ. ಇನ್ನುಳಿದಂತೆ ಉಳಿದ ತರಗತಿಗಳಿಗೆ ವಿದ್ಯಾಗಮ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.