This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports News

ಇಂದಿನಿಂದ ವಿಧಾನ ಮಂಡಲ ಅಧಿವೇಶನ ಸುಧೀರ್ಘ ದಿನಗಳ ನಂತರ ನಡೆಯುತ್ತಿದೆ ಅಧಿವೇಶನ

WhatsApp Group Join Now
Telegram Group Join Now

ಬೆಂಗಳೂರು –

ಇಂದಿನಿಂದ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನ ನಡೆಯಲಿದೆ ಹೌದು ಬಜೆಟ್‌ ಅಧಿವೇಶನದ ನಡೆದು ಸುದೀರ್ಘ‌ ವಿರಾಮದ ಬಳಿಕ ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದು ಸಹಜವಾಗಿಯೇ ಈ ಅಧಿವೇಶನದ ಬಗೆಗೆ ರಾಜ್ಯದ ಜನರಲ್ಲಿ ಭಾರೀ ಕುತೂಹಲವಿದೆ.ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಗಾಗಿನ ಪರೀಕ್ಷೆಗಳಲ್ಲಿ ಭಾರೀ ಅಕ್ರಮಗಳು ನಡೆದು ಅನರ್ಹರು ಮತ್ತು ಪ್ರಭಾವಿಗಳು ಸರಕಾರಿ ಹುದ್ದೆಗೆ ನೇಮಕಗೊಂಡಿರುವ ಸರಣಿ ಪ್ರಕರಣಗಳು ಬಯಲಾಗಿದ್ದು ಹೀಗಾಗಿ ಈ ಬಾರಿಯ ಅಧಿವೇಶನ ಸಾಕಷ್ಟು ಪ್ರಮಾಣ ದಲ್ಲಿ ಕುತೂಹಲ ಕೆರಳಿಸಿದೆ.

ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಗೆ ಭಂಗ, ಬೆಂಗಳೂರು-ಮೈಸೂರು ಹೆದ್ದಾರಿ,ಮಂಗಳೂರಿನಲ್ಲಿ ಕೈಗೆತ್ತಿಕೊಳ್ಳಲಾಗಿರುವ ಸ್ಮಾರ್ಟ್‌ಸಿಟಿ ಯೋಜನೆ ಸೃಷ್ಟಿಸಿ ರುವ ಅವಾಂತರಗಳು,ವಿವಿಧ ಜಿಲ್ಲೆಗಳಲ್ಲಿ ಪ್ರಗತಿಯಲ್ಲಿರು ವ ಹೆದ್ದಾರಿ ಕಾಮಗಾರಿಗಳ ಅವ್ಯವಸ್ಥೆ,ಪ್ರತಿ ಮಳೆಗಾಲದ ಲ್ಲಿಯೂ ನಗರಗಳಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗುತ್ತಿ ರುವುದು ಸಹಿತ ಹತ್ತು ಹಲವು ಸಮಸ್ಯೆಗಳ ಬಗೆಗೆ ವಿಪಕ್ಷಗಳು ಸರಕಾರದ ಗಮನ ಸೆಳೆಯಲು ಸಜ್ಜಾಗಿವೆ. ರಾಜ್ಯ ಸರಕಾರದ ವಿರುದ್ಧ ಈ ಹಿಂದೆ ಕೇಳಿ ಬಂದಿದ್ದ 40 ಪರ್ಸೆಂಟ್‌ ಕಮಿಷನ್‌ ಆರೋಪ ಪದೇ ಪದೇ ಪ್ರತಿಧ್ವನಿಸು ತ್ತಿದ್ದು ಈ ಬಗ್ಗೆಯೂ ಸದನಗಳಲ್ಲಿ ವಾಕ್ಸಮರ ನಡೆಯುವ ಎಲ್ಲ ಸಾಧ್ಯತೆ ಇದೆ.

ಅಧಿವೇಶನ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ,ಸಭಾತ್ಯಾಗ,ಧರಣಿ ಇವೆಲ್ಲವೂ ಸಾಮಾನ್ಯ.ಆದರೆ ವರ್ಷಗಳುರುಳಿದಂತೆಯೇ ಇವೆಲ್ಲವೂ ಎಲ್ಲೆ ಮೀರುತ್ತಿದ್ದು ಆಡಳಿತ ಮತ್ತು ವಿಪಕ್ಷಗಳ ನಾಯಕರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.ಸದನದ ನಿರ್ದಿಷ್ಟ ಕಾರ್ಯ ಕಲಾಪಗಳು ನಡೆಯುವುದರ ಜೊತೆಯಲ್ಲಿ ಜನರ ಸಮಸ್ಯೆ ಬೇಡಿಕೆಗಳ ಕುರಿತಂತೆ ಶಾಸಕರು ಸದನದಲ್ಲಿ ಪ್ರಸ್ತಾವಿಸಿ ಅವುಗಳಿಗೆ ಸರಕಾರದಿಂದ ಸ್ಪಷ್ಟ ಉತ್ತರ ಬಯಸುವುದು ಸಹಜ.ಆದರೆ ಇದ್ಯಾವುದಕ್ಕೂ ಅವಕಾಶ ನೀಡದೆ ಯಾವು ದಾದರೊಂದು ವಿಷಯವನ್ನು ಮುಂದಿಟ್ಟು ಅದನ್ನು ಸುದೀರ್ಘ‌ ಕಾಲ ಎಳೆದು ಸದನದ ಕಾರ್ಯಕಲಾಪವನ್ನು ಹಾಳುಗೆಡಹುವ ಸಂಪ್ರದಾಯ ಇದೀಗ ಮಾಮೂಲು ಎಂಬಂತಾಗಿದೆ.

ಈ ಬಾರಿಯ ಅಧಿವೇಶನ 10 ದಿನಗಳಷ್ಟೇ ನಡೆಯಲಿದ್ದು ಈ ಅಲ್ಪ ಅವಧಿಯಲ್ಲಿ ಉಭಯ ಸದನಗಳಲ್ಲಿ ಮಹತ್ವದ ವಿಷಯಗಳ ಬಗೆಗೆ ಚರ್ಚೆಗಳು ನಡೆಯಬೇಕಿದೆ.ರಾಜ್ಯದ ಅಭಿವೃದ್ಧಿ,ಜನರ ಹಿತದೃಷ್ಟಿಯನ್ನುಗಮನದಲ್ಲಿರಿಸಿಕೊಂಡು ಈ ಬಾರಿಯಾದರೂ ಅಧಿವೇಶನ ಸುಸೂತ್ರವಾಗಿ ನಡೆಯಲಿ.


Google News

 

 

WhatsApp Group Join Now
Telegram Group Join Now
Suddi Sante Desk