ಧಾರವಾಡ –
ಧಾರವಾಡ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಮತ್ತು ತುಂಬಾ ಅವಶ್ಯಕವಾಗಿದ್ದ ಸೈದಾಪೂರದ ರುದ್ರ ಭೂಮಿಗೆ ಶಾಸಕ ಅಮೃತ ದೇಸಾಯಿ ಹೈಟೇಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಹೌದು ನಗರದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಈ ಒಂದು ರುದ್ರಭೂಮಿಗೆ ಸಧ್ಯ 46 ಲಕ್ಷ ಅನುದಾನವನ್ನು ನೀಡಿದ್ದು ಇಂದು ಧಾರವಾಡ ಶಹರದರಲ್ಲಿ ಬರುವ ಗುಲಗಂಜಿಕೊಪ್ಪದ ರುದ್ರಭೂಮಿಯಲ್ಲಿ ಧಾರವಾಡ ಜನರ ಬಹು ದಿನಗಳ ಬೇಡಿಕೆ ಆಗಿದ್ದ ವಿದ್ಯುತ್ ಚಿತಾಗಾರ ಕಾಮಗಾರಿಗೆ ಚಾಲನೆ ನೀಡಲಾಯಿತು.
46 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸುವ ಕಾಮ ಗಾರಿಗೆ ಶಾಸಕ ಅಮೃತ ದೇಸಾಯಿ ಭೂಮಿ ಪೂಜೆ ಮಾಡಿ ಚಾಲನೆ ನೀಡಿದರು.ಈ ಒಂದು ಸಂಧರ್ಭದಲ್ಲಿ ಮಹಾನ ಗರ ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ,ಶ್ರೀಮತಿ ಅನಿತಾ ಚಳಗೇರಿ,ಸುನೀಲ್ ಮೊರೆ, ಬಸವರಾಜ ಕೆಂಚನಳ್ಳಿ,ಪ್ರಮುಖರಾದ ಸಂತೋಷ್ ದೇವರೆಡ್ಡಿ,ಪ್ರಭು ಹಿರೇಮಠ.ಸಂತೋಷ ಕೋಟಿ,ಸಿ ಎಸ್ ಪಾಟೀಲ ಹಾಗೂ ಕಲ್ಮೇಶ್ವರ ದೇವಸ್ತಾನದ ಅದ್ಯಕ್ಷರು ಹಾಗೂ ಸರ್ವ ಸದಸ್ಯ ರು ಸೇರಿದಂತೆ ಆತ್ಮಾನಂದ ನಗರ,ಕುಮಾರೇಶ್ವರ ನಗರ, ಸೈದಾಪುರ, ಗುಲಗಂಜಿಕೊಪ್ಪದ ಎಲ್ಲಾ ಗುರು ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.