ನಕಲಿ ದಾಖಲೆ ಕೊಟ್ಟು ಶಿಕ್ಷಕ ರಾಗಿದ್ದವರಿಗೆ ಗೇಟ್ ಪಾಸ್ ನೇಮಕಗೊಂಡಿದ್ದ 2,494 ಮಂದಿಗೆ ಗೇಟ್ ಪಾಸ್ ಕೊಟ್ಟು ಮನೆಗೆ ಕಳಿಸಿದ ಸರ್ಕಾರ…..

Suddi Sante Desk

ಲಖನೌ –

ನಕಲಿ ದಾಖಲೆಗಳನ್ನು ನೀಡಿ ಶಿಕ್ಷಕರಾಗಿದ್ದ 2496 ನಕಲಿ ಶಿಕ್ಷಕರಿಗೆ ಗೇಟ್ ಪಾಸ್ ನೀಡಿ ಮನೆ ಕಳಿಸಿದ ಘಟನೆ ಲಖನೌ ದಲ್ಲಿ ನಡೆದಿದೆ.ಹೌದು ಕಳೆದ ಮೂರು ವರ್ಷಗ ಳಲ್ಲಿ ಉತ್ತರ ಪ್ರದೇಶದಲ್ಲಿ 2,494 ಶಿಕ್ಷಕರು ನಕಲಿ ದಾಖಲೆ ಗಳನ್ನು ನೀಡಿ ನೇಮಕವಾಗಿರುವ ಸಂಗತಿ ರಾಜ್ಯ ಪ್ರಾಥ ಮಿಕ ಶಿಕ್ಷಣ ಇಲಾಖೆ ಮತ್ತು ವಿಶೇಷ ಕಾರ್ಯಪಡೆ (ಎಸ್ಟಿಎಫ್)ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ.ಈ ಬಗ್ಗೆ ಎಸ್ಟಿಎಫ್ ನ ಹಿರಿಯ ಅಧಿಕಾರಿಯೊಬ್ಬರು ಮಾತನಾ ಡಿದ್ದು ಇದು ಒಂದು ಸಣ್ಣ ಭಾಗವಷ್ಟೇ ಇಡೀ ರಾಜ್ಯಾದ್ಯಂತ ಸರಿಯಾದ ರೀತಿಯಲ್ಲಿ ತನಿಖೆ ಮಾಡಿದರೆ 10 ಸಾವಿರಕ್ಕೂ ಹೆಚ್ಚು ನಕಲಿ ಶಿಕ್ಷಕರು ಸಿಗುತ್ತಾರೆ ಎಂದರು.ಶಿಕ್ಷಣ ಇಲಾಖೆ ಯ ನೇಮಕಾತಿ ಹಗರಣ ಭಾರೀ ಸುದ್ದಿಯಾದ ಬೆನ್ನಲ್ಲೇ 2020ರಲ್ಲಿ ಉತ್ತರ ಪ್ರದೇಶ ಸರ್ಕಾರ ಎಸ್ಟಿಎಫ್ ತಂಡ ವನ್ನು ರಚಿಸಿ ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು.

ಅಂದಿನಿಂದ ತನಿಖೆ ಕೈಗೆತ್ತಿಕೊಂಡ ಎಸ್ಟಿಎಫ್, ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಗುರುತಿಸಿದೆ ಮತ್ತು ಎಫ್‌ಐಆರ್ ನೋಂದಣಿ, ಸೇವೆ ಯಿಂದ ವಜಾಗೊಳಿಸುವುದು,ವೇತನದ ಹಣ ವಸೂಲಿ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಧಿಕೃತ ಮಾಹಿತಿಯ ಪ್ರಕಾರ, ತನಿಖಾ ವೇಳೆ 2,461 ನಕಲಿ ಶಿಕ್ಷಕರನ್ನು ವಜಾಗೊಳಿಸಲಾಗಿದೆ.ನಮ್ಮ ಮಾನವ ಸಂಪನ್ಮೂಲ ಪೋರ್ಟಲ್‌ನಲ್ಲಿ ಡೇಟಾಬೇಸ್‌ಗಳನ್ನು ರಚಿಸಿದ್ದೇವೆ. 10 ರಿಂದ 12 ಹಾಗೂ ಪದವಿ ಶಿಕ್ಷಣ (BEd) ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ (TET) ಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳನ್ನು ಅಪ್‌ಲೋಡ್ ಮಾಡಿದ್ದೇವೆ. ಜಿಲ್ಲೆಯಲ್ಲಿನ ನಮ್ಮ ಸಮಿತಿಯು ಇಂತಹ ಸಾಕಷ್ಟು ಪ್ರಕರ ಣಗಳನ್ನು ತನಿಖೆ ನಡೆಸುತ್ತಿದೆ ಮತ್ತು ಸಾಕಷ್ಟು ಪರಿಶ್ರಮದ ನಂತರ ನಾವು ಹಲವು ಶಿಕ್ಷಕರನ್ನು ನಕಲಿ ಎಂದು ಕಂಡು ಕೊಂಡಿದ್ದೇವೆ ಎಂದರು.ನಕಲಿ ಶಿಕ್ಷಕರ ವಿರುದ್ಧ ಎಫ್‌ಐಆರ್,ವಸೂಲಾತಿ ನೋಟೀಸ್ ಮತ್ತು ಅಮಾನತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನಾಮಿಕಾ ಶುಕ್ಲಾ ಅವರ ನಿಗೂಢ ಪ್ರಕರಣವು ನೇಮ ಕಾತಿ ಹಗರಣದ ತನಿಖೆಗೆ ಪ್ರಮುಖ ತಿರುವು ನೀಡಿತು. 2020ರ ಜೂನ್ ತಿಂಗಳಲ್ಲಿ ‘ಅನಾಮಿಕಾ ಶುಕ್ಲಾ’ ಎಂಬು ವರ ಶಿಫಾರಸು ಪತ್ರವನ್ನು ಬಳಸಿಕೊಂಡು ಹಲವಾರು ಮಹಿಳೆಯರು ಸರ್ಕಾರಿ ಶಾಲೆಗಳಿಗೆ ನೇಮಕವಾಗಿರುವುದು ಪತ್ತೆಯಾದ ನಂತರ ಯುಪಿ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು. ಅನಾಮಿಕಾ ಶುಕ್ಲಾ ಶಿಫಾ ರಸು ಮೇಲೆ ನೇಮಕಗೊಂಡ ಹಲವಾರು ಶಿಕ್ಷಕರನ್ನು ರಾಜ್ಯದ ಹಲವು ಜಿಲ್ಲೆಗಳಿಂದ ಬಂಧಿಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.