ಧಾರವಾಡ –
ರಾಜ್ಯದಲ್ಲಿನ ಪದವೀಧರ ಶಿಕ್ಷಕರ ಸಮಸ್ಯೆಗಳು ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದ್ದು ಇವರ ಸಮಸ್ಯೆ ಗಳ ಕುರಿತು ಕಳೆದ ಹಲವಾರು ವರ್ಷಗಳಿಂದ ಧ್ವನಿ ಎತ್ತುತ್ತಾ ಬಂದರು ಕೂಡಾ ಈವರೆಗೆ ಯಾವುದೇ ರೀತಿಯ ಸಮಸ್ಯೆ ಗಳಿಗೆ ಪರಿಹಾರದ ಉತ್ತರ ಮಾತ್ರ ಶೂನ್ಯ.ಇನ್ನೂ ಪ್ರಮುಖವಾಗಿ 2016 ಕ್ಕಿಂತ ಪೂರ್ವ ದಲ್ಲಿ ನೇಮಕವಾದ PST ಶಿಕ್ಷಕರಿಗೆ GPT ವೃಂದಕ್ಕೆ ಮರು ಹೊಂದಾಣಿಕೆ ಮಾಡುವ ಬಗ್ಗೆ ಯೂ ಮನವಿ ಸಲ್ಲಿಸಿ ವಿವಿಧ ಹಂತಗಳಲ್ಲಿ ಹೋರಾಟ ಮಾಡಿ ಒತ್ತಾಯವನ್ನು ಮಾಡಲಾಗಿದೆ ಆದರೂ ಕೂಡಾ ಸ್ಪಂದಿಸಿಲ್ಲ ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ದ ರಾಜ್ಯ ಘಟಕವು ನ್ಯಾಯಯುತ ಬೇಡಿಕೆಗಳ ಕುರಿತು ಸ್ಪಂದಿಸುವಂತೆ ರಾಜ್ಯದ ಮುಖ್ಯಮಂತ್ರಿ ಗಳಿಗೆ ಒತ್ತಾಯವನ್ನು ಮಾಡಿದೆ
ಸಂಘದ ಅಧ್ಯಕ್ಷರಾಗಿರುವ ಎಸ್ ವೈ ಸೊರಟಿ ಅವರು ವಿಧಾನ ಪರಿಷತ್ ಸದಸ್ಯರಾಗಿರುವ ಎಸ್ ವ್ಹಿ ಸಂಕನೂರ ಅವರಿಗೆ ಪತ್ರವನ್ನು ಬರೆದು ಬೇಡಿಕೆಗಳ ಈಡೇರಿಕೆಗೆ ಒತ್ತಾಯವನ್ನು ಮಾಡಿದ್ದಾರೆ.ಅಲ್ಲದೇ ನೀವು ನಿಮ್ಮ MLC ಗಳಿಂದ ತಕ್ಷಣವೇ ಸರ್ಕಾರ ಮತ್ತು ಶಿಕ್ಷಣ ಸಚಿವರ ಮೇಲೆ ಒತ್ತಡ ತನ್ನಿ ಯಾರೊ ಮಾಡ್ತಾರೆ ಅನ್ನುವ ಭಾವನೆ ಬಿಡಿ ಇದು ನಮ್ಮ ಸ್ವಾಭಿಮಾನದ ಪ್ರಶ್ನೇ ಎಳಿ ಎದ್ದೇಳಿ ಗುರಿ ಮುಟ್ಟುವ ತನಕ ಪದವಿಧರ ಶಿಕ್ಷಕರ ಹೋರಾಟ ಸಾಗಲೆಂ ದು ನಮ್ಮ ಹಾರೈಕೆ ಎಂದು ಉಲ್ಲೇಖ ಮಾಡಿ ಶಿಕ್ಷಕರಿಗೆ ಕರೆ ಯನ್ನು ಕೊಟ್ಟಿದ್ದಾರೆ