ದಾವಣಗೆರೆ –
ಡಿಸೆಂಬರ್ 23 ಒಳಗಾಗಿ ಪಂಚಮಸಾಲಿ ಸಮುದಾಯಕ್ಕೇ 2ಎ ಮೀಸಲಾತಿ ನೀಡಿ. ಇಲ್ಲದಿದ್ದರೆ ಇಲ್ಲವಾದರೆ 23 ರಿಂದ ವಿಧಾನ ಸೌಧ ಮುತ್ತಿಗೆ ಹಾಕಲು ಪಾದಯಾತ್ರೆ ಮಾಡಲಾಗುತ್ತೆ ಎಂದು ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದ್ರು.
ದಾವಣಗೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಬಿಎಸ್ ವೈ ಗೆ ಜಯ ಮೃತ್ಯುಂಜಯ ಸ್ವಾಮೀಜಿ ಡೆಡ್ ಲೈನ್ ನೀಡಿದ್ರು.
ಬಿಎಸ್ ಯಡಿಯೂರಪ್ಪ ಸಿಎಂ ಆಗಲು ಪಂಚಮಸಾಲಿ ಸಮಾಜದ ಕೊಡುಗೆ ಹೆಚ್ಚಿದೆ.ಪಂಚಾಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ಉಪವಾಸ ಕುಂತಿದ್ದೆ.ಅವಾಗ ನೀವೆ ಕರೆ ಮಾಡಿ ಬೇಡಿಕೆ ಈಡೇರಿಸುತ್ತೇವೆ ಉಪವಾಸ ಕೈಬಿಡಿ ಅಂತ ಹೇಳಿದ್ರಿ. ಆ ರೀತಿ ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದರು. ಡಿಸೆಂಬರ್ 23 ಒಳಗೆ ನೀವು ನಮಗೆ ೨ಎ ಮೀಸಲಾತಿ ನೀಡಬೇಕು.ಇಲ್ಲವಾದರೆ 23 ರಿಂದ ವಿಧಾನ ಸೌಧ ಮುತ್ತಿಗೆ ಹಾಕಲು ಪಾದಯಾತ್ರೆ ಮಾಡಲಾಗುತ್ತೆ ಎಂದು ಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದರು.ಇದರೊಂದಿಗೆ ಸಿಎಂ ಬಿಎಸ್ ವೈ ಗೆ ಡೆಡ್ ಲೈನ್ ಕೊಟ್ಟರು.