ಧಾರವಾಡ –
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಪುರಾತನ ಕೋಟೆಯ ಹತ್ತಿರ ಉಡುಗಣಿ ತಾಳಗುಂದ ಕೆರೆ ತುಂಬುವ ಯೋಜನೆಯ ಪೈಪ್ ಲೈನ್ ಅಳವಡಿಕೆಯ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗದಂತೆ, ಹಾಗೇ ಪೈಪ್ ಲೈನ್ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿ ಧಾರವಾಡದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆಯನ್ನು ಮಾಡಲಾಯಿತು.

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂಘಟನೆಯ ಮುಖಂಡ ಮುತ್ತು ಬೆಳ್ಳಕ್ಕಿ ನೇತ್ರತ್ವದಲ್ಲಿ ಹೋರಾಟವನ್ನು ಮಾಡಲಾಯಿತು. ಕಾಮಗಾರಿಯನ್ನು ಪರ್ಯಾಯ ಮಾರ್ಗದಲ್ಲಿ ಕೈಗೊಂಡು ರೈತರಿಗೆ ಅನ್ಯಾಯವಾಗದಂತೆ ಪೈಪ ಲೈನ ಕಾರ್ಯ ಕೈಗೊಳ್ಳಬೇಕು ಹಾಗೇ ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿಯನ್ನು ಕಳೆದುಕೊಂಡ ರೈತರಿಗೆ ಶೀಘ್ರವಾಗಿ ಬಾಕಿ ಇರುವ ಹಣವನ್ನು ಪಾವತಿಸುವಂತೆ ಒತ್ತಾಯಿಸಿದ್ರು.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಪುರಾತನ ಕೋಟೆಯ ಹತ್ತಿರ ಉಡುಗಣಿ ತಾಳಗುಂದ ಕೆರೆ ತುಂಬುವ ಯೋಜನೆಯ ಪೈಪ್ ಲೈನ್ ಅಳವಡಿಕೆಯ ಪರ್ಯಾಯ ಮಾರ್ಗದಲ್ಲಿ ರೈತರಿಗೆ ಅನ್ಯಾಯ ವಾಗದಂತೆ ಪೈಪ ಲೈನ ಕಾರ್ಯ ಕೈಗೊಳ್ಳಬೇಕು, ಹಾಗೂ ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿಯನ್ನು ಕಳೆದುಕೊಂಡ ರೈತರಿಗೆ ಶೀಘ್ರವಾಗಿ ಬಾಕಿ ಇರುವ ಹಣವನ್ನು ಪಾವತಿಸುವ ಮೂಲಕ ಅನ್ಯಾಯವಾದ ರೈತರಿಗೆ ಶಾಶ್ವತ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಸಂಘಟನೆಯ ಮುಖಂಡರು ಕಾರ್ಯಕರ್ತರು ಒತ್ತಾಯವನ್ನು ಮಾಡಿದರು.

ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಧಾರವಾಡದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯರಾದ ಅರುಣ್ ಸುತಾರೆ, ವಿವೇಕ್ ಕಡೆಮನಿ, ಅಭಿಷೇಕ ಬೆಳ್ಳಕ್ಕಿ, ಹರ್ಷದ್ ಪಠಾಣ, ಸಂತೋಷ ಪಾಟೀಲ ,ಕಮಲು ಪೂಲವಾಲೆ, ಜ್ಯೋತಿಬಾ ಪಾಟೀಲ್, ಎಸ್ ಎಸ್ ಪಾಟೀಲ, ಸಂತೋಷ್ ಭದ್ರಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.