ಮೈಸೂರು –
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯ ನಡುವೆ ಅಪರೂಪದ ಪ್ರಸಂಗವೊಂದು ಜರುಗಿದೆ. ಹೌದು ಸರ್ಕಾರಿ ನೌಕರಿ ಕೊಡಿ ಇಲ್ಲವೇ ಕೊಳವೆ ಬಾವಿ ತೊಡಿಸಿಕೊಡಿ ಎಂದು ಯುವಕನೊಬ್ಬ ಮನವಿ ಪತ್ರವನ್ನು ಮತ ಪೆಟ್ಟಿಗೆಗೆ ಹಾಕಿರುವುದು ಮತ ಎಣಿಕೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.ಅಲ್ಲದೆ ಇನ್ನೊಬ್ಬ ಮತ ದಾರ ಯಾರು ದುಡ್ಡು ಕೊಟ್ಟಿಲ್ಲ ಅಂತಾ ಚುನಾವಣಾ ಅಭ್ಯರ್ಥಿಗಳ ವಿರುದ್ಧ ಕಿಡಿಕಾರಿದ್ದಾರೆ.

.
ನಾನು ಎಂ.ಎ,ಬಿ.ಎಡ್ ಮಾಡಿದ್ದೇನೆ.ಆದರೆ ನನಗೆ ಕೆಲಸ ಇಲ್ಲ.ನಮ್ಮಪ್ಪನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜಮೀನಿಗೆ ಕೊಳವೆ ಬಾವಿಯ ಅವಶ್ಯಕತೆ ಇದೆ.ನನಗೆ ಸರ್ಕಾರಿ ಕೆಲಸ ಕೊಡಿ.ಇಲ್ಲ ಅಂದ್ರೆ ಜಮೀನಿನಲ್ಲಿ ಕೊಳವೆ ಬಾವಿ ತೊಡಿಸಿಕೊಡಿ ಎಂದು ಮನವಿ ಪತ್ರ ಬರೆದು ಮತಪೆ ಟ್ಟಿಗೆಯಲ್ಲಿ ಹಾಕಿದ್ದಾನೆ.ಇದಿಷ್ಟೇ ಅಲ್ಲದೆ,ಪೆಟ್ರೋಲ್ ಬೆಲೆ ಇಳಿಸಲು ಮನವಿ ಮಾಡಿದ್ದಾನೆ.ರಸಗೊಬ್ಬರ ಬೆಲೆ ಕಡಿಮೆ ಮಾಡುವಂತೆಯೂ ಕೇಳಿಕೊಂಡಿದ್ದಾನೆ.ಸದ್ಯ ಯುವಕ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದು,ಸಿಕ್ಕಾಪಟ್ಟೆ ವೈರಲ್ ಕೂಡ ಆಗುತ್ತಿದೆ.ಮಿಶ್ರ ಪ್ರತಿ ಕ್ರಿಯೆಗಳು ವ್ಯಕ್ತವಾಗುತ್ತಿವೆ.
ಅಂದಹಾಗೆ ಪತ್ರ ಬರೆದ ಯುವಕನ ಹೆಸರು ರಾಜೇಂದ್ರ. ಈತ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂ ಕಿನ ಗಣಿಗನೂರು ಗ್ರಾಮದ ನಿವಾಸಿ.ರಾಜೇಂದ್ರ ಮಾತ್ರ ವಲ್ಲದೆ, ಅನೇಕರು ಮತ ಪೆಟ್ಟಿಯೊಳಗಡೆ ವಿಭಿನ್ನ ಕೊರಿ ಕೆಯ ಪತ್ರಗಳನ್ನು ಹಾಕಿದ್ದಾರೆ.ಬ್ಯಾಲೆಟ್ ಪತ್ರ ಮೇಲೆಯೇ ಅಭ್ಯರ್ಥಿಗಳ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿ ದ್ದಾರೆ.ಯಾವ ಅಭ್ಯರ್ಥಿಗಳು ಕೂಡ ಹಣ ಕೊಟ್ಟಿಲ್ಲ ಎಂದು ಬ್ಯಾಲೇಟ್ ಪೇಪರ್ ಮೇಲೆ ಮತದಾರ ಬರೆದಿದ್ದಾನೆ.