ಹುಬ್ಬಳ್ಳಿ –
ವಿದ್ಯುತ್ ತಗುಲಿ ಯುವಕನೊರ್ವ ಸಾವಿಗೀಡಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಹಳೇ ಹುಬ್ಬಳ್ಳಿಯ ಹಜ್ಮೀರ್ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಹಜ್ಮೀರ್ ನಗರದಲ್ಲಿನ ಮಸೀದಿ ಮೇಲೆ ಮೌಲಾಲಿ ದೊಡಮನಿ ಎಂಬುವರು ವಿದ್ಯುತ್ ದೀಪಗಳನ್ನು ಹಾಕಲು ಹತ್ತಿದ್ದಾರೆ. ಮಸೀದಿ ಮೇಲೆ ವಿದ್ಯುತ್ ದೀಪ ಹಾಕುವ ಸಮಯದಲ್ಲಿ ಪಕ್ಕದಲ್ಲಿದ್ದ ವಿದ್ಯುತ್ ತಂತಿಯನ್ನು ನೋಡದೇ ಕೆಲಸ ಮಾಡುವಾಗ ತಂತಿ ತಗುಲಿದೆ. ತಂತಿ ತಗಲುತ್ತಿದ್ದಂತೆ ಸ್ಥಳದಲ್ಲಿಯೇ ಮೌಲಾಲಿ ಮೇಲಿನಿಂದ ಕೆಳಗೆ ಬಿದ್ದು ಸಾವಿಗೀಡಾಗಿದ್ದಾನೆ.

ಮಸೀದಿ ಮೇಲೆ ಲೈಟ್ ಹಾಕಲು ಹೋಗಿ ವಿದ್ಯುತ್ ತಂತಿ ತಗುಲಿ ಅಮಾಯಕವಾಗಿ ಬಲಿಯಾಗಿದ್ದಾನೆ. ಇನ್ನೂ ಮಸೀದಿಯ ಮೇಲೆ ವಿದ್ಯುತ್ ದೀಪಗಳನ್ನು ಹಾಕಲು ಹೋಗಿದ್ದ ಸಂದರ್ಭದಲ್ಲಿ ಈ ಒಂದು ಘಟನೆ ನಡೆದಿದೆ.ಇನ್ನೂ ವಿಷಯ ತಿಳಿದ ಹಳೇ ಹುಬ್ಬಳ್ಳಿಯ ಪೊಲೀಸ್ ಇನಸ್ಪೇಕ್ಟರ್ ಶಿವಾನಂದ ಕಮತಗಿ ಮತ್ತು ಸಿಬ್ಬಂದ್ದಿಗಳು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ರು.ಮೌಲಾಲಿ ದೊಡ್ಡಮನಿ ಮೃತನಾದ ಯುವಕನಾಗಿದ್ದು ಸಧ್ಯ ಹಳೇ ಹುಬ್ಬಳ್ಳಿ ಪೋಲಿಸ್ ರು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಮಾಡ್ತಾ ಇದ್ದಾರೆ.