ಹುಬ್ಬಳ್ಳಿ –
ಹುಬ್ಬಳ್ಳಿಯ ಗೋಕುಲ ಠಾಣೆ ಪೊಲೀಸರು ಕಳ್ಳತನ ಪ್ರಕರಣವೊಂದನ್ನು ಭೇಧಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನವಾದ್ರೆ ಪೊಲೀಸರಿಗೆ ದೊಡ್ಡ ತಲೆನೋವು ಕಳ್ಳತನ ಆಗಿದ್ದು ಒಂದೆಡೆಯಾದ್ರೆ ಕಳ್ಳತನ ಮಾಡಿದ ಆರೋಪಿಗಳನ್ನು ಹಿಡಿಯೊದು ಅಷ್ಟೇ ಕಷ್ಟ. ಸಧ್ಯ ನಾವು ಹೇಳಲು ಹೋರಟಿರೊದು ಇಂಥಹದೊಂದು ಪ್ರಕರಣವನ್ನು. ಎಸ್ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸೆಂಟ್ರೆಲ್ ಏಕ್ಸೆಂಜ್ ಕಾಲೊನಿಯಲ್ಲಿ ವಾಸವಾಗಿದ್ದು ಪೂನಂ ಪುಂಡಲೀಕ ಪವಾರ ತಮ್ಮ ಮನೆಗೆ ಬೀಗ ಹಾಕಿಕೊಂಡು ಹೋದಾಗ ಮನೆಯ ಬೀಗವನ್ನು ಮುರಿದು ಮನೆಯಲ್ಲಿದ್ದ 10 ಸಾವಿರ ರೂಪಾಯಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಪ್ರಕರಣವನ್ನು ದಾಖಲು ಮಾಡುತ್ತಾರೆ.
ಇನ್ನೂ ಇತ್ತ ಸಿಲ್ವರ್ ಟೌನ್ ನಲ್ಲಿ ವಾಸವಾಗಿದ್ದ ಅವಿನಾಶ್ ಗೌಡರ ಕೂಡಾ ತಮ್ಮ ಮನಗೆ ಬೀಗವನ್ನು ತಮ್ಮೂರಾದ ಶಿವಮೊಗ್ಗಕ್ಕೇ ಹೋಗಿರುತ್ತಾರೆ. ನವಂಬರ್ 14 ಕ್ಕೇ ಮನೆಗೆ ಬೀಗವನ್ನು ಹಾಕಿಕೊಂಡು ತಮ್ಮೂರಿಗೆ ಹೋದ ಅವಿನಾಶ್ ರ ಮನೆ ಕೂಡಾ ಕಳ್ಳತವಾಗಿರುತ್ತದೆ.ನವಂಬರ್ 18 ಕ್ಕೇ ಮರಳಿ ಹುಬ್ಬಳ್ಳಿಗೆ ಮನೆಗೆ ಬಂದು ನೋಡಿದಾಗ ಮನೆ ಕಳ್ಳತನವಾಗಿರುವ ಘಟನೆ ಕಂಡು ಬರುತ್ತದೆ. ಕೂಡಲೇ ಹತ್ತಿರದಲ್ಲಿದ್ದ ಗೋಕುಲ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ.
ಮನೆಯ ಬೀಗವನ್ನು ಮುರಿದು ಮನೆಯಲ್ಲಿನ ಎಲ್ ಇಡಿ ಟಿವಿ ಹಾಗೂ ನೀಲಿ ಬಣ್ಣದ ಯಾಕ್ಟಿವಾ ಹೋಂಡಾ ಬೈಕ್ ಹಾಗೇ ಲ್ಯಾಪ್ ಟಾಪ್ ಹೀಗೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಕಳ್ಳರು ಹೋಗಿದ್ದರು.ಇವೆರೆಡು ಪ್ರಕರಗಳನ್ನು ಗಂಭೀರವಾಗಿ ತಗೆದುಕೊಂಡ ಗೋಕುಲ ಪೊಲೀಸರು ಎದ್ದೋ ಬಿದ್ದೋ ಎಂಬಂತೆ ಎರಡು ಸ್ಥಳಗಳಿಗೆ ಕಳ್ಳತನ ನಡೆದ ದಿನದಿಂದ ಪ್ರತಿದಿನ ಭೇಟಿ ನೀಡಿ ಪರಿಶೀಲನೆ ಮಾಡ್ತಾರೆ. ಕಳ್ಳತನ ಮಾಡಿದವರ ಮಾಹಿತಿಯು ಯಾವುದಾದರೂ ಮೂಲದಿಂದ ಸಿಗಬಹುದು ಎಂದುಕೊಂಡ ಪೊಲೀಸರು ತಲೆಕೆಡಿಸಿಕೊಳ್ಳಾತ್ತಾರೆ. ಅತ್ತ ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಳ್ಳತನ ಪ್ರಕರಣಗಳಾದವು ಹೇಗೆ ಇವುಗಳನ್ನು ಪತ್ತೆ ಹಚ್ಚಬೇಕು. ಹೊಸ ಪೊಲೀಸ್ ಆಯುಕ್ತರು ಹೊಸ ಡಿಸಿಪಿ ಸಾಹೇಬ್ರು ಅವರು ಕೇಳುವ ಮುಂಚೆಯೇ ಎರಡು ಕೇಸ್ ಗಳನ್ನು ಕ್ಲೀಯರ್ ಮಾಡಬೇಕು ಎಂದುಕೊಂಡ ಗೋಕುಲ ಪೊಲೀಸರಿಗೆ ಯಾವ ಭಾಗದಿಂದಲೂ ಇವೆರಡು ಮನೆಗಳನ್ನು ಕಳ್ಳತನ ಮಾಡಿದ ಬಗ್ಗೆ ಮಾಹಿತಿ ಸಿಗೊದಿಲ್ಲ. ನಮ್ಮ ಗೋಕುಲ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ ಎರಡು ಕಳ್ಳತನ ಕೇಸ್ ಗಳನ್ನು ಗಂಭೀರವಾಗಿ ತಗೆದುಕೊಂಡು ಅವುಗಳನ್ನು ಹೇಗಾದರೂ ಮಾಡಿ ಭೇಧಿಸಬೇಕು ಎಂದುಕೊಂಡ ಗೋಕುಲ ಪೊಲೀಸ್ ಠಾಣೆ ಇನಸ್ಪೇಕ್ಟರ್ ತಮ್ಮ ಸಿಬ್ಬಂದ್ದಿಗೆ ಹಳೇಯ ಕೇಸ್ ಪೈಲ್ ಗಳನ್ನು ಒಮ್ಮೇ ನೋಡಿ ಎಂದು ಹೇಳ್ತಾರೆ.ಕ್ರೈಂಮ್ ಸಿಬ್ಬಂದ್ದಿ ಹತ್ತಾರು ಪೈಲ್ ಗಳನ್ನು ಕೈಯಲ್ಲಿ ಹಿಡಿದುಕೊಂಡು ನೋಡುವಾಗ ಒಂದು ಮಹತ್ವದ ಪೈಲ್ ಕೈಗೆ ಸಿಗುತ್ತದೆ. ಅದು ಕಳ್ಳತನ ಪ್ರಕರಣದ ಪ್ರಕರಣ.ಹಿಂದೆ ನಡೆದ ಒಂದು ಕಳ್ಳತನ ಪ್ರಕರಣದಲ್ಲಿ ಪ್ರೇಮಕುಮಾರ ಭೀಮಪ್ಪ ಪೂಜಾರ ಬಂಧನವಾಗಿ ಜೈಲು ಸೇರಿದ ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದನು.
ನಗರದ ರಾಮಲಿಂಗೇಶ್ವರ ನಗರದ ನಿವಾಸಿಯಾದ ಇವನ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಇವನಿಗೆ ಪೊಲೀಸ್ ಠಾಣೆಗೆ ಬರಲು ಹೇಳ್ತಾರೆ. ಗೋಕುಲ ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ಪೊಲೀಸರು ವಿಚಾರಣೆ ಮಾಡಿದಾಗ ಹೌದು ಸಾರ್ ನಾವೇ ಎರಡು ಮನೆಗಳನ್ನು ಕಳ್ಳತನ ಮಾಡಿದ್ದು ಎಂದು ಒಪ್ಪಿಕೊಳ್ಳುತ್ತಾರೆ. ನಂತರ ಯಾರು ಯಾರು ಸೇರಿ ಕಳ್ಳತನ ಮಾಡಿದ್ದು ಎಂದಾಗ ಜೊತೆಯಲ್ಲಿದ್ದ ಸಹಚರರ ಹೆಸರನ್ನು ಪ್ರೇಮಕುಮಾರ ಹೇಳುತ್ತಿದ್ದಂತೆ ಅವರನ್ನು ಎತ್ತಾಕಿಕೊಂಡು ಬಂದ ಪೊಲೀಸರಿಗೆ ಎರಡು ಕಳ್ಳತನ ಪ್ರಕರಣಗಳ ಸಂಪೂರ್ಣವಾದ ಜಾಲ ಪತ್ತೆಯಾಗುತ್ತದೆ. ಬಂಧಿತರಿಂದ 85 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವ ಗೋಕುಲ ಪೊಲೀಸರು ಆರೋಪಿಗಲನ್ನು ಜೈಲಿಗೆ ಅಟ್ಟಿದ್ದಾರೆ. ಇವೆಲ್ಲದರ ನಡುವೆ ಕಳ್ಳತನ ಮಾಡಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗೆ ಬಂದು ಮತ್ತೇರೆಡು ಕಳ್ಳತನ ಮಾಡಿ ಜೈಲು ಸೇರಿದ್ದಾನೆ ಪ್ರೇಮ್ ಕುಮಾರ ಇವನಿಂದ ಎರಡು ಕೇಸ್ ಗಳು ಪತ್ತೆಯಾಗಿದ್ದು ಒಳ್ಳೇಯ ಕೆಲಸ ಮಾಡಿದ ನಮ್ಮ ಗೋಕುಲ ಪೊಲೀಸ್ ಠಾಣೆಯ ಸಿಬ್ಬಂದ್ದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಬಹುಮಾನವನ್ನು ಷೋಷಿಸಿ ಅಭಿನಂದಿಸಿದ್ದಾರೆ.
ಇನ್ನೂ ಈ ಒಂದು ಕಾರ್ಯಾಚರಣೆಯು ಗೋಕುಲ್ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ನಾಗರಾಜ ಕಮ್ಮಾರ, ಎಂ ಎಚ್ ಮೂಗನೂರ್,ಎಎಸ್ ಐ ಬಸವರಾಜ ಬೆಳಗಾವಿ,ಮಹಾದೇವ ಹೊನ್ನಪ್ಪನವರ,ಕೆ ಎಚ್ ನೀಲಪ್ಪಗೌಡರ್, ಸಂಜೀವ ರೆಡ್ಡಿ ಕಣಬುರ,ವಿಜಯಕುಮಾರ ಹಕಾಟೆ ಸೇರಿದಂತೆ ಇತರ ಸಿಬ್ಬಂದ್ದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಪ್ರಕರಣವನ್ನು ಭೇಧಿಸಿದ್ದಾರೆ.