ಬೆಂಗಳೂರು –
2020-21ನೇ ಶೈಕ್ಷಣಿಕ ಸಾಲಿಗೆ ದಾಖಲಾತಿಗಾಗಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಗೆ ದಿನಾಂಕ 06-02-2021ರವರೆಗೆ ವಿಸ್ತರಿಸಲಾಗಿತ್ತು. ಇದೀಗ ವಿದ್ಯಾರ್ಥಿಗಳು ಮತ್ತು ಪೋಷಕರ ಮನವಿಯ ಮೇರೆಗೆ ಪ್ರಥಮ ಪಿಯುಸಿ ತರಗತಿಗಳು ತಡವಾಗಿ ಆರಂಭವಾದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಥಮ ಪಿಯುಸಿಗೆ ಮಾತ್ರ ದಾಖಲಾತಿಯ ದಿನಾಂಕವನ್ನು 13-02-2021ರ ವರೆಗೆ ವಿಸ್ತರಿಸಲಾಗಿದೆ.
ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು(ಶೈಕ್ಷಣಿಕ) ಸುತ್ತೋಲೆ ಹೊರಡಿಸಿದ್ದು, 2020-21ನೇ ಶೈಕ್ಷಣಿಕ ಸಾಲಿಗೆ ದಾಖಲಾತಿ ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ದಿನಾಂಕ 06-02-2021 ರವರೆಗೆ ವಿಸ್ತರಿಸಲಾಗಿತ್ತು ಈಗ ಪ್ರವೇಶ ಪಡೆಯಲು ದಿನಾಂಕ ವಿಸ್ತರಣೆ ಮಾಡಲಾಗಿದೆ ಎಂದಿದ್ದಾರೆ.
ಆದ್ರೇ ವಿದ್ಯಾರ್ಥಿಗಳ ಮನವಿಯಂತೆ ಪ್ರಥಮ ಪಿಯುಸಿ ತರಗತಿಗಳು ದಿನಾಂಕ 01-02-2021 ರಂದು ತಡವಾಗಿ ಆರಂಭವಾದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಾಖಲಾತಿಗೆ ಅನುಕೂಲವಾಗಲು ಪ್ರಥಮ ಪಿಯುಸಿಗೆ ಮಾತ್ರ ದಾಖಲಾತಿಯ ದಿನಾಂಕವನ್ನು 13-02-2021 ರವರೆಗೆ ವಿಸ್ತರಿಸಲಾಗಿದೆ.
ದಾಖಲಾತಿ ಶುಲ್ಕವನ್ನು ಖಜಾನೆಗೆ ಮಾರನೇ ಕಾರ್ಯನಿರತ ದಿನದಂದು ಕಡ್ಡಾಯವಾಗಿ ಪಾವತಿಸುವುದು ಎಂಬುದಾಗಿ ತಿಳಿಸಿದ್ದಾರೆ.