ಬೆಂಗಳೂರು –
ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಅಡಿಯಲ್ಲಿ ಸರ್ಕಾರದಿಂದ ತುಟ್ಟಿಭತ್ಯೆ(ಡಿಎ)ಡಿಯರ್‌ನೆಸ್ ರಿಲೀಫ್(ಡಿಆರ್)ಹೆಚ್ಚಳದ ಜೊತೆಗೆ,ಹೆಚ್‌ಆರ್‌ಎ ಕುರಿತು ಶೀಘ್ರದಲ್ಲೇ ಆದೇಶ ಹೊರ ಬೀಳುವ ಸಾಧ್ಯತೆ ಇದೆ.ಹೌದು ಹೋಳಿಗೂ ಮುನ್ನವೇ ಸರ್ಕಾರದಿಂದ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ.ಕೇಂದ್ರ ಮತ್ತು ರಾಜ್ಯ ನೌಕರರ ಫಿಟ್ ಮೆಂಟ್ ಅಂಶವನ್ನು ಹೆಚ್ಚಿಸುವ ಕುರಿತು ಸರ್ಕಾರದಿಂದ ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ.ಫಿಟ್ ಮೆಂಟ್ ಅಂಶದಲ್ಲಿನ ಬದಲಾವಣೆಯಿಂದಾಗಿ,ಉದ್ಯೋಗಿಗಳ ಕನಿಷ್ಠ ವೇತನ ಹೆಚ್ಚಾಗುತ್ತದೆ.ಫಿಟ್ ಮೆಂಟ್ ಅಂಶವನ್ನು 2.57 ರಿಂದ 3.68 ಕ್ಕೆ ಹೆಚ್ಚಿಸಬೇಕೆಂದು ಹಲವಾರು ನೌಕರರ ಸಂಘಗಳು ಸರ್ಕಾರಕ್ಕೆ ಮನವಿ ಮಾಡಿವೆ.
ಇನ್ನೂ ಪ್ರಮುಖವಾದ ಮೂಲಗಳ ಪ್ರಕಾರ 2 ಲಕ್ಷ ರೂ ವರೆಗೆ ಒಂದು ಬಾರಿ ಪರಿಹಾರವನ್ನು ಕೇಂದ್ರ ಸಚಿವ ಸಂಪುಟವು ತುಟ್ಟಿ ಭತ್ಯೆಯಾಗಿ ನೀಡಬಹುದು.ಇದಕ್ಕೆ ಒಪ್ಪಿಗೆ ನೀಡಿದರೆ ನೌಕರರ ಖಾತೆಗೆ 18 ತಿಂಗಳ ಡಿಎ ಬಾಕಿ ಬರಲಿದೆ.
ಸರ್ಕಾರದ ಪರವಾಗಿ ನೌಕರರ ಫಿಟ್ ಮೆಂಟ್ ಅಂಶವನ್ನು ಶೇಕಡ 2.57 ರಿಂದ 3.68 ಕ್ಕೆ ಹೆಚ್ಚಿಸಿದರೆ, ಅದು ಮೂಲ ವೇತನವನ್ನು ಹೆಚ್ಚಿಸುತ್ತದೆ.ಫಿಟ್ ಮೆಂಟ್ ಅಂಶವನ್ನು ಹೆಚ್ಚಿಸಿದ ನಂತರ ಉದ್ಯೋಗಿಗಳ ಕನಿಷ್ಠ ವೇತನ ರೂ. ಅಂದರೆ 18000 ರೂ.ಗಳ ಸಂಬಳ 26000 ರೂ.ಗೆ ಏರಿಕೆಯಾಗಲಿದೆ.ಕೇಂದ್ರ ನೌಕರರ ಡಿಎಯನ್ನು ಸರ್ಕಾರವು 3% ರಷ್ಟು ಹೆಚ್ಚಿಸಿ 34% ಕ್ಕೆ ಹೆಚ್ಚಳ ಮಾಡಬಹುದು. ಹೋಳಿಗೂ ಮುನ್ನ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಬಹುದಾಗಿದೆ.ಈಗಾಗಲೇಒಡಿಶಾ ರಾಜ್ಯ ಸರ್ಕಾರವು ನೌಕರರ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಿದೆ.ಹಿಮಾಚಲ ಪ್ರದೇಶ ಸರ್ಕಾರ ಜನವರಿ 31 ರಂದು ಡಿಎ ಹೆಚ್ಚಳವನ್ನು ಪ್ರಕಟಿಸಿದೆ.