ಧಾರವಾಡ
ಧಾರವಾಡದಲ್ಲಿ ಇದೇ ಮೊದಲ ಬಾರಿದ ದೊಡ್ಡ ಪ್ರಮಾಣದಲ್ಲಿ ನಡೆದ ಇಸ್ಪೇಟ್ ದಾಳಿಯಲ್ಲಿನ ಕಥೆ ಇದು. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ಸೇರಿದಂತೆ ಗದಗ ಹಾವೇರಿ ಬೆಳಗಾವಿ ಹೀಗೆ ಬೇರೆ ಬೇರೆ ಜಿಲ್ಲೆಗಳಿಂದ ದೊಡ್ಡ ದೊಡ್ಡ ವ್ಯಕ್ತಿಗಳು ಗಣ್ಯರು ಹೊಟೇಲ್ ಉದ್ಯಮಿಗಳು ರಾಜಕೀಯ ಮುಖಂಡರು ನಾಯಕರು ಹೀಗೆ ಬರೋಬ್ಬರಿ 50 ಕ್ಕೂ ಹೆಚ್ಚು ಜನರು ನಗರದ ಹೊರವಲಯದ ಕ್ಲಬ್ ವೊಂದರಲ್ಲಿ ಇಸ್ಪೇಟ್ ಆಡಲು ಸೇರುತ್ತಾರೆ.

ಸಂಜೆ ಕ್ಲಬ್ ನಲ್ಲಿ ಸೇರಿದ ಎಲ್ಲರೂ ದೊಡ್ಡ ಪ್ರಮಾಣದಲ್ಲಿ ಇಸ್ಪೇಟ್ ಎಲೆ ತಟ್ಟಲು ಸ್ಟಾರ್ಟ್ ಮಾಡುತ್ತಾರೆ. ಒಂದೇಡೆ ಬೆಳಕಿನ ಹಬ್ಬ ಸಡಗರ ಸಂಭ್ರಮ ಮತ್ತೊಂದೆಡೆ ಕ್ಲಬ್ ನಲ್ಲಿ ಸೇರಿದವರೆಲ್ಲರೂ ಬ್ಯಾಗ್ ನಲ್ಲಿ ಲಕ್ಷ ಲಕ್ಷ ರೂಪಾಯಿ ತುಂಬಿಕೊಂಡು ಎಲೆ ತಟ್ಟಲು ಕುಳಿತುಕೊಳ್ಳುತ್ತಾರೆ. ಘಟಾನು ಘಟಿ ನಾಯಕರು ಗಣ್ಯರ ಭರ್ಜರಿಯಾದ ನಾಲ್ಕೈದು ಆಟಗಳು ನಡೆದಿರುತ್ತದೆ.

ಎಲೆ ತಟ್ಟುವವರ ಮುಂದೆ ಎಲ್ಲಿ ನೋಡಿದಲ್ಲೂ ದುಡ್ಡೇ ದುಡ್ಡೇ ಇವೆಲ್ಲದರ ನಡುವೆ ಜೋರಾಗಿ ಸಾಗಿದ ಆಟದ ನಡುವೆ ಪಿಲ್ಮಂ ನಲ್ಲಿ ಪೊಲೀಸರು ಎಂಟ್ರಿ ಕೊಟ್ಟಂತೆ ಧಾರವಾಡ ಜಿಲ್ಲಾ ಪೊಲೀಸರು ಬರುತ್ತಾರೆ.ಸ್ಥಳಕ್ಕೇ ಬಂದು ಆಟವನ್ನು ನೋಡಿ ಆಡುವವರನ್ನು ನೋಡಿದ ಪೊಲೀಸರು ಏನು ಮಾಡಬೇಕು ಎಂದುಕೊಂಡು ಗಾಬರಿಯಾಗುತ್ತಾರೆ. ಒಂದೇಡೆ ಉನ್ನತಾಧಿಕಾರಿಗಳ ಸೂಚನೆ ಮಾಹಿತಿ ಮತ್ತೊಂದೆಡೆ ಸ್ಥಳೀಯ ಗಣ್ಯರು ರಾಜಕೀಯ ಮುಖಂಡರು ಇವೆಲ್ಲದರ ನಡುವೆ ಏನು ಮಾಡಬೇಕು ಎನ್ನುವಷ್ಟರಲ್ಲಿ ಕೊನೆಗೂ ಪೊಲೀಸರು ರೇಡ್ ಮಾಡುತ್ತಾರೆ. ಪೊಲೀಸರು ಹೋಗುತ್ತಿದ್ದಂತೆ ಕೆಲವರು ತಮ್ಮಲ್ಲಿನ ದುಡ್ಡನ್ನು ಕುಳಿತುಕೊಂಡ ಜಾಗದಲ್ಲಿಯೇ ಬಿಟ್ಟು ನಮ್ಮನ್ನು ಬಿಟ್ಟು ಬಿಡಿ ಪ್ಲೀಸ್ ನಮ್ಮನ್ನು ಬಿಟ್ಟು ಬಿಡಿ ಎನ್ನುತ್ತಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪೊಲೀಸರು ದುಡ್ಡಿನೊಂದಿಗೆ ಸ್ಥಳದಲ್ಲಿದ್ದ 50 ಕ್ಕೂ ಹೆಚ್ಚು ಜನರನ್ನು ಬಂಧಿಸಿ ಕರೆದುಕೊಂಡು ಬರುತ್ತಾರೆ.

ದಾಳಿಯಿಂದ ಹಿಡಿದು ಗ್ರಾಮೀಣ ಪೊಲೀಸ್ ಠಾಣೆಗೆ ಎಲ್ಲರನ್ನೂ ಕರೆದುಕೊಂಡು ಬರುವವರೆಗೂ ಪೊಲೀಸರಿಗೆ ಸಾಕಷ್ಟು ಒತ್ತಡಗಳು ಬರುತ್ತವೆ. ಅದಕ್ಕೂ ಯಾವುದೇ ತಲೆಕೆಡಿಸಿಕೊಳ್ಳದ ನಮ್ಮ ಜಿಲ್ಲಾ ಪೊಲೀಸರು ತಾವಾಯಿತು ತಮ್ಮ ಕೆಲಸವಾಯಿತೆಂದುಕೊಂಡು ಸಿಕ್ಕವರ ಮೇಲೆ ದೂರು ದಾಖಲು ಮಾಡಿ ನಂತರ ನ್ಯಾಯಾಲಯಕ್ಕೇ ಹಾಜರು ಮಾಡುತ್ತಾರೆ. ಧಾರವಾಡ ಗ್ರಾಮೀಣ ಪೊಲೀಸರ ಈ ಒಂದು ಕಾರ್ಯಕ್ಕೇ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಸೇರಿದಂತೆ ಹಿರಿಯ ಅಧಿಕಾರಿಗಳು ಶಹಬ್ಬಾಸ್ ಗಿರಿ ಹೇಳುತ್ತಾರೆ. ಆದರೆ ಇದು ಒಂದೆಡೆಯಾದರೆ ದಾಳಿಯ ಸಮಯದಲ್ಲಿ ಸಿಕ್ಕಿದ್ದು ಬರೋಬ್ಬರಿ 2 ಕೋಟಿ ಗಿಂತಲೂ ಹೆಚ್ಚು ಹಣವಂತೆ. ದಾಳಿಯ ಸಮಯದಲ್ಲಿ ಅಷ್ಟೋಂದು ಹಣ ಇತ್ತು ಆದರೆ ಪೊಲೀಸರು ತೋರಿಸಿದ್ದು ಕೇವಲ 49 ಲಕ್ಷ ಅಷ್ಟೇ ಯಾಕೆ ಎಂಬ ಅನುಮಾನದ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಈ ಕುರಿತಂತೆ ಶಾಸಕರೊಬ್ಬರು ಜಿಲ್ಲಾ ಎಸ್ಪಿಯವರಿಗೆ ಮಾತನಾಡಿ ದಾಳಿಯ ಸಮಯದಲ್ಲಿ ಕೋಟಿ ಕೋಟಿ ರೂಪಾಯಿ ಸಿಕ್ಕಿದೆ ಆದರೆ ನಿಮಗೆ ನಿಮ್ಮ ಅಧಿಕಾರಿಯೊಬ್ಬರು ಕಡಿಮೆ ದುಡ್ಡನ್ನು ತೋರಿಸಿದ್ದಾರೆ.ಅದು ನಿಮಗೆ ಗೋತ್ತಿಲ್ಲವೆ ಒಮ್ಮೇ ನೋಡಿ ಅದನ್ನು ಇದನ್ನು ಗಂಭೀರವಾಗಿ ತಗೆದುಕೊಳ್ಳಿ ಎಂದಿದ್ದಾರೆ. ಸರಿ ಸರ್ ಖಂಡಿತಾ ಚೇಕ್ ಮಾಡುತ್ತೇನೆ ನೋಡುತ್ತೆನೆ ಎಂದುಕೊಂಡು ಎಸ್ಪಿ ಸಾಹೇಬ್ರು ಸುಮ್ಮನಾಗುತ್ತಾರೆ.

ಇನ್ನೂ ಇತ್ತ ಈ ಮಾತುಗಳು ಕೂಡಾ ಹುಬ್ಬಳ್ಳಿ ಧಾರವಾಡ ಸೇರಿದಂತೆ ಎಲ್ಲೆಂದರಲ್ಲಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದು ನಿಜವಾಗಿಯೂ ದಾಳಿಯ ಸಮಯದಲ್ಲಿ 2 ಕೋಟಿಗೂ ಹೆಚ್ಚು ಹಣ ಇತ್ತಾ ಸ್ಥಳದಲ್ಲಿ ಇದ್ದರೇ ಆದರೆ ತೋರಿಸಿದ್ದು 47 ಲಕ್ಷ ಅಷ್ಟೇ ಯಾಕೇ ಹಾಗಾದರೆ ಉಳಿದ ಹಣ ಎಲ್ಲಿ ಹೋಯಿತು ಯಾರು ಗುಳುಂ ಮಾಡಿದರು ಇದರ ಹಿಂದೆ ನಿಜವಾಗಿಯೂ ಯಾವ ಪೊಲೀಸ್ ಅಧಿಕಾರಿ ಇದ್ದಾರೆ ಎಂಬ ಸಂಶಯದ ಮಾತುಗಳು ಈಗ ಎಲ್ಲೇಡೆ ಗುಸು ಗುಸು ಪಿಸು ಮಾತಾಗಿ ಕೇಳಿ ಬರುತ್ತಿವೆ. ಇನ್ನೂ ಇದನ್ನು ಶಾಸಕರೊಬ್ಬರು ಎಸ್ಪಿ ಯವರ ಗಮನಕ್ಕೇ ತಂದರು ಖಡಕ್ ಐಪಿಎಸ್ ಜಿಲ್ಲಾ ಎಸ್ಪಿ ಕೃಷ್ಣಕಾಂತ ಸೂಕ್ಷ್ಮವಾಗಿ ಗಮನಿಸಿ ರೇಡ್ ಮಾಡಿಸಿದ ಹಾಗೇ ಇದನ್ನು ರೇಡ್ ಮಾಡಿಸಿ ಎಲ್ಲೆಂದರಲ್ಲಿ ಮಾತನಾಡಿಕೊಳ್ಳುತ್ತಿರುವ ಮಾತುಗಳಿಗೆ ಉತ್ತರ ನೀಡಬೇಕಿದೆ.ಇಲ್ಲವಾದರೆ ಮತ್ತೇ ಎಲ್ಲರ ಹಾಗೇ ಇವರು ಎಂದುಕೊಳ್ಳುತ್ತಾರೆ ಸಾರ್ವಜನಿಕರು.ಇದರ ನಡುವೆ ಎಸ್ಪಿ ಸಾಹೇಬ್ರು ಏನು ಮಾಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.