ಬೈಕ್ ಸ್ಕೀಡ್ – ತಂಗಿಗೆ ಗೌರಿ ಹುಣ್ಣುಮೆಗೆ ಸಕ್ಕರೆ ಆರತಿ ತೆಗೆದುಕೊಂಡು ಹೋಗುತ್ತಿದ್ದವ ಆಸ್ಪತ್ರೆಗೆ ಸೇರಿದ

Suddi Sante Desk

ಕಲಘಟಗಿ – ಗೌರಿ ಹುಣ್ಣಿಮೆ ಸಹೋದರಿಗೆ ಸಕ್ಕರಿ ಆರತಿಯನ್ನು ತಗೆದುಕೊಂಡು ಹೋಗುತ್ತಿದ್ದ ಬೈಕ್ ಸ್ಕೀಡ್ ಆಗಿ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ಕಲಘಟಗಿಯಲ್ಲಿ ನಡೆದಿದೆ. ಜಿನ್ನೂರ ದ್ಯಾವನಕೊಂಡ ಗ್ರಾಮದ ಹತ್ತಿರವಿರುವ ಸೇತುವೆ ಬಳಿ ಬೈಕ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.

ಮುಕ್ಕಲ ಗ್ರಾಮದ ಹನುಮಂತಪ್ಪ ಹೊರಕೇರಿ ಎಂಬುವರು ನಿನ್ನೆ ಸಂಜೆ ವೇಳೆ ತಮ್ಮ ಗ್ರಾಮದಿಂದ ಗೌರಿ ಹುಣಿಮೆಯಂದು ಸಕ್ಕರೆ ಆರತಿ ತೆಗೆದುಕೊಂಡು ದ್ವಿಚಕ್ರ ವಾಹನದ ಮೇಲೆ ತಾಲ್ಲೂಕಿನ ಹಿಂಡಸಗೇರಿ ಗ್ರಾಮದ ತಂಗಿ ಮನೆಗೆ ಹೊರಟಿದ್ದರು. ಜಿನ್ನೂರ ದ್ಯಾವನಕೊಂಡ ಗ್ರಾಮದ ಹತ್ತಿರವಿರುವ ಸೇತುವೆ ಬಳಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.

ಈ ಸೇತುವೆ ಮಳೆಯಿಂದ ಕೊಚ್ಚಿ ಹೋಗಿದ್ದು ರಾತ್ರಿ ಸಮಯದಲ್ಲಿ ಇದನ್ನು ನೋಡದೆ ಹಾಗೆ ಚಲಾಯಿಸುತ್ತಿದ್ದಾಗ ಸೇತುವೆ ಆಯಾ ತಪ್ಪಿ ಬಿದ್ದು ತೀರ್ವ ಅಪಘಾತ ಸಂಭವಿಸಿದೆ.
ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಅಂಬುಲೆನ್ಸ್ ವಾಹನಕ್ಕೆ ಕರೆ ಮಾಡಿ ಚಿಕಿತ್ಸೆಗಾಗಿ ಕಲಘಟಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.