ಧಾರವಾಡ –
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಅಲ್ಲಾಪೂರ ಗ್ರಾಮ ಪಂಚಾಯತ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಕಾರ್ಯವನ್ನು ರಾಜ್ಯ ಸರ್ಕಾರ ಗುರುತಿಸಿದೆ. ಹೌದು ಗುಡೇನಕಟ್ಟಿ ಪಂಚಾಯತ ವ್ಯಾಪ್ತಿಯಲ್ಲಿನ ಅಲ್ಲಾಪೂರ ಗ್ರಾಮ ಪಂಚಾಯತ ಸದಸ್ಯರಾಗಿರುವ ಮಲ್ಲಿಕಾರ್ಜುನ ರಡ್ಡೇರ ಸ್ವತಃ ತಾವೇ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಇತ್ತೀಚಿಗಷ್ಟೇ ಪಂಚಾಯತ ಸದಸ್ಯರಾಗಿ ಆಯ್ಕೆಯಾದ ಬೆನ್ನಲ್ಲೇ ಸಾಕಷ್ಟು ಪ್ರಮಾಣದಲ್ಲಿ ಗ್ರಾಮ ದಲ್ಲಿ ಮಾದರಿಯಾದ ಹತ್ತು ಹಲವಾರು ಕೆಲಸ ಕಾರ್ಯ ಗಳನ್ನು ಮಾಡಿ ಜಿಲ್ಲೆಯಲ್ಲಿ ಗುರುತಿಸಿಕೊಂಡು ಮಾದರಿ ಯಾಗಿದ್ದಾರೆ.
ವೃತ್ತಿಯಲ್ಲಿ ಪತ್ರಕರ್ತರಾಗಿ ಸಾಕಷ್ಟು ಸಮಾಜದಲ್ಲಿನ ಸಮಸ್ಯೆ ಜನರ ನೋವು ಗಳನ್ನು ಅರಿತುಕೊಂಡಿರುವ ಇವರು ಸಧ್ಯ ಗ್ರಾಮವನ್ನು ಜಿಲ್ಲೆಯಲ್ಲಿ ಮಾದರಿಯನ್ನಾಗಿ ಮಾಡಿದ್ದು ಇವರ ಕಾರ್ಯವನ್ನು ನೋಡಲು ಗ್ರಾಮಕ್ಕೆ ಸಾಕಷ್ಟು ಪ್ರಮಾದಣದಲ್ಲಿ ಬೇರೆ ಬೇರೆ ಊರುಗಳಿಂದ ಜನ ಪ್ರತಿನಿಧಿಗಳು ಬರುತ್ತಿದ್ದು ಇದೇಲ್ಲದರ ನಡುವೆ ಸಧ್ಯ ಇವರ ಕಾರ್ಯವನ್ನು ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಗುರುತಿಸಿದ್ದು ಕೆಲಸವನ್ನು ಹೋಗಳಿರುವ ಅಧಿಕಾರಿಗಳು ಶೀಘ್ರದಲ್ಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡೊದಾಗಿ ಹೇಳಿ ಗ್ರಾಮ ಪಂಚಾ ಯತ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಅವರಿಗೆ ಮೇಲ್ ಕಳಿಸಿದ್ದಾರೆ.
ಇದರೊಂದಿಗೆ ಇವರ ಕಾರ್ಯವನ್ನು ಗುರುತಿಸಿದ್ದು ಇವರ ಕೆಲಸಕ್ಕೆ ಹಿಡಿದ ಕೈಗನ್ನಡಿಯಾಗಿದ್ದು ಇದಕ್ಕೆ ಮಲ್ಲಿಕಾರ್ಜುನ ರಡ್ಡೇರ ಕೂಡಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ.