ಬೆಂಗಳೂರು –
ಕರ್ನಾಟಕದ ಸರ್ಕಾರಿ ನೌಕರರಿಗೆ ವಿಶೇಷ ರಜೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.ವಿವಿಧ ಸಂದರ್ಭದಲ್ಲಿ ನೌಕರರು ತಮ್ಮ ರಜೆಗಳನ್ನು ಸೂಕ್ತವಾಗಿ ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತಿದೆ.ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಯಾವ ರೀತಿ ರಜೆಗಳನ್ನು ಪಡೆದುಕೊಳ್ಳಬಹುದು ಯಾವ ಸಂದರ್ಭದಲ್ಲಿ ತೆಗೆದುಕೊಳ್ಳುವ ರಜೆಗೆ ಯಾವ ರೀತಿಯ ನಿಯಮಗಳು ಅನ್ವಯಿಸುತ್ತವೆ ಎಂಬುದನ್ನು ಉಲ್ಲೇಖಿಸಲಾಗಿದೆ.
ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯನಿರ್ವಾಹಕ ಸಮಿತಿ ಅಧ್ಯಕ್ಷರು ಮಹಾ ಕಾರ್ಯದರ್ಶಿ ಮತ್ತು ಸಂಘಟನಾ ಕಾರ್ಯದರ್ಶಿಗಳಿಗೆ ಹಾಗೂ ಕರ್ನಾಟಕದ ಕೆಳ ದರ್ಜೆ ನೌಕರರ ಕೇಂದ್ರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು,ಮಹಾ ಕಾರ್ಯದರ್ಶಿ ಮತ್ತು ಸಂಘಟನಾ ಕಾರ್ಯದರ್ಶಿಗಳಿಗೆ ವರ್ಷದಲ್ಲಿ 15 ದಿನ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು.ಅದೇ ರೀತಿ ಎಂಥಾ ಸಂದರ್ಭದಲ್ಲಿ ನೌಕರರು ಯಾವ ರೀತಿ ರಜೆಗ ಳನ್ನು ಪಡೆದುಕೊಳ್ಳಬಹುದು.
ರಕ್ತದಾನ ಮಾಡುವ ಸರ್ಕಾರಿ ನೌಕರನಿಗೆ ನೀಡುವ ಪ್ರಮಾಣಪತ್ರಕ್ಕೆ ಅನುಗುಣವಾಗಿ ಒಂದು ದಿನದ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು.ಸರ್ಕಾರಿ ನೌಕರನು ಮೂತ್ರಪಿಂಡ ವೈಫಲ್ಯದಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಒಂದು ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ನೀಡಬಹುದು ಆದರೆ ಸಕ್ಷಮ ವೈದ್ಯಕೀಯ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವವರು ಚಿಕಿತ್ಸಾ ತಜ್ಞರು ರೂಪಿಸುವ ಯೋಜನೆಯ ಅನುಸಾರ ಪಡೆಯುವ ಕಿಮೋ ಅಥವಾ ರೆಡಿಯೋ ಥೆರೆಪಿ ಚಿಕಿತ್ಸೆ ನಂತರ ಅಗತ್ಯ ವಿಶ್ರಾಂತಿಗೆ ಸಂಬಂಧಿಸಿದಂತೆ ಸಕ್ಷಮ ವೈದ್ಯ ಕೀಯ ಪ್ರಮಾಣಪತ್ರವನ್ನು ಸಲ್ಲಿಸಿ 6 ತಿಂಗಳ ವರೆಗೂ ರಜೆ ಪಡೆದುಕೊಳ್ಳಬಹುದು.
ಸರ್ಕಾರದ ನಿಯಮ 117(7) (ಎ) ಅಡಿಯಲ್ಲಿ ಗಳಿಸದ ರಜೆಯನ್ನು ಮಂಜೂರು ಮಾಡಿಕೊಂಡ ಸರ್ಕಾರಿ ನೌಕರನು ಸೇವೆಗೆ ರಾಜೀನಾಮೆ ನೀಡಿ ದರೆ ಅಥವಾ ಕರ್ತವ್ಯಕ್ಕೆ ಸ್ವ-ಇಚ್ಛೆಯಿಂದ ರಾಜೀ ನಾಮೆ ಸಲ್ಲಿಸಿದ ಎಂದುಕೊಳ್ಳಿ.ನೌಕರನ ಈ ವಿನಂತಿಗೆ ಅನುಮತಿ ನೀಡಿದರೆ ಅವನ ರಾಜೀ ನಾಮೆ, ನಿವೃತ್ತಿ ಹಾಗೂ ರಜೆಯು ಪ್ರಾರಂಭವಾದ ದಿನಾಂಕದಿಂದ ಜಾರಿಗೆ ಬರುವ ಹಾಗೆ ರಜೆಯನ್ನು ರದ್ದುಗೊಳಿಸಬೇಕು ಹಾಗೂ ಈಗಾಗಲೇ ಪಾವತಿ ಮಾಡಿರುವ ರಜಾ ಸಂಬಳವನ್ನು ವಸೂಲಿ ಮಾಡ ತಕ್ಕದ್ದು.
ಅದರಲ್ಲೂ ಸರ್ಕಾರದ ನಿಯಮ 117(7) (ಬಿ) ಗಳಿಸದ ರಜೆಯನ್ನು ಪಡೆದುಕೊಂಡ ಸರ್ಕಾರಿ ನೌಕರನು ಕೆಲಸಕ್ಕೆ ಹಿಂತಿರುಗಿ ಆದರೆ ಅಂಥಹ ರಜೆಯನ್ನು ಗಳಿಸುವುದಕ್ಕೆ ಮುಂಚೆಯೇ ರಾಜೀ ನಾಮೆಯನ್ನು ಕೊಟ್ಟರೆ ಅಥವಾ ಸೇವೆಯಿಂದ ನಿವೃತ್ತಿಯಾದರೆ ಅನಂತರ ಗಳಿಸದಿರುವ ರಜೆ ಯಷ್ಟರ ಮಟ್ಟಿಗೆ ರಜಾ ವೇತನವನ್ನು ಹಿಂತಿರು ಗಿಸಲು ಬದ್ಧರಾಗಿರತಕ್ಕದ್ದು. ಸೇವೆಯಲ್ಲಿ ಮುಂದುವರಿಯಲು ಸರ್ಕಾರಿ ನೌಕರನನ್ನು ಅಶಕ್ತಗೊಳಿಸುವ ಅನಾರೋಗ್ಯದ ನಿಮಿತ್ತ ಅವನು ನಿವೃತ್ತನಾದರೆ ಅಥವಾ ಕಡ್ಡಾಯ ನಿವೃತ್ತಿಗೊಳಿಸಿದರೆ ಅಥವಾ ಮೃತನಾದರೆ ಯಾವುದೇ ರಜೆ ಸಂಬಳವನ್ನು ವಸೂಲಿ ಮಾಡತಕ್ಕದ್ದಲ್ಲ.
ಸರ್ಕಾರಿ 112ರ ನಿಯಮದ ಅಡಿಯಲ್ಲಿ ರಜಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯನ್ನು ಉಳಿದು ಇತರೆ ಯಾವುದೇ ಸರ್ಕಾರಿ ನೌಕರನು ಒಂದು ಕ್ಯಾಲೆಂಡರ್ ವರ್ಷದಲ್ಲಿ 30 ಗಳಿಕೆ ರಜೆ ಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಅದೇ ರೀತಿ ಗಳಿಕೆ ರಜೆಯನ್ನು ಪ್ರತಿ ವರ್ಷ ಎರಡು ಕಂತುಗಳಲ್ಲಿ ಅಂದರೆ ಜನವರಿ 1 ಮತ್ತು ಜುಲೈ 1ರಂದು ಮುಂಗಡವಾಗಿ ಪ್ರತಿ ಕಂತಿಗೆ 15 ದಿನ ಗಳಂತೆ ರಜೆಗಳನ್ನು ಲೆಕ್ಕ ಮಾಡಿ ಜಮೆ ಮಾಡ ತಕ್ಕದ್ದು. ಹಾಗೆ ಜಮೆ ಮಾಡಿದ ರಜೆಗಳ ಸಂಖ್ಯೆ ಯು ಒಂದು ವರ್ಷದಲ್ಲಿ 30 ಅನ್ನು ಮೀರ ಬಾರದು.
ಡಿಸೆಂಬರ್ ಅಥವಾ ಜುಲೈ ಮಾಹೆಗೆ 300 ಅಥವಾ 285 ದಿವಸಗಳಿಗಿಂತ ಹೆಚ್ಚಿದ್ದಲ್ಲಿ ಪ್ರತ್ಯೇಕವಾಗಿ ನಮೂದಿಸುವುದು.ಸರ್ಕಾರಿ ನೌಕರನ ರಜೆಯು ಲೆಕ್ಕಕ್ಕೆ ಅವನು ಯಾವ ಅರ್ಧ ವರ್ಷದಲ್ಲಿ ನೇಮಕಗೊಂಡನೋ ಆ ಅರ್ಧ ವರ್ಷದಲ್ಲಿ ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ 2.5 ದಿನಗಳು ದರದಲ್ಲಿ ಗಳಿಕೆ ರಜೆ ಯನ್ನು ಜಮಾ ಮಾಡತಕ್ಕದ್ದು.ಯಾವ ಅರ್ಧ ವರ್ಷದಲ್ಲಿ ಸರ್ಕಾರಿ ನೌಕರನು ನಿವೃತ್ತನಾಗಲಿರು ವನೋ ತೆಗೆದು ಹಾಕಿದಾಗ ಅಥವಾ ಸೇವೆಗೆ ರಾಜೀನಾಮೆ ನೀಡಲಿರುವನೋ ಆ ಅರ್ಧ ವರ್ಷದ ರಜೆಯ ಜಮೆಯನ್ನು ಅವನ ನಿವೃತ್ತಿ ಅಥವಾ ರಾಜೀನಾಮೆ ದಿನಾಂಕದವರೆಗೂ ಸೇವೆಯ ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ 2.5 ದಿನಗಳಂತೆ ಲೆಕ್ಕ ಹಾಕತಕ್ಕದ್ದು.
ಸರ್ಕಾರಿ ನೌಕರನನ್ನು ಸೇವೆಯಿಂದ ವಜಾ ಮಾಡಿದಾಗ ಅಥವಾ ತೆಗೆದು ಹಾಕಿದಾಗ ಅಥವಾ ಸೇವೆಯಲ್ಲಿ ಇರುವಾಗ ಮೃತ ಹೊಂದಿದ್ದಲ್ಲಿ ಯಾವ ಮಾಹೆಯಲ್ಲಿ ಮೃತ ಹೊಂದುವನೋ ಆ ಮಾಹೆಯ ಹಿಂದಿನ ತಿಂಗಳ ಕೊನೆಯವರೆಗೂ ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ 2.5 ದಿನಗಳನ್ನು ಜಮೆ ಮಾಡಬೇಕಾಗುತ್ತದೆ.136ರ ಅಡಿ ವಿಶೇಷ ಅಸಮರ್ಥತಾ ರಜೆ ಸರ್ಕಾರದ 136ರ ನಿಯಮದ ಅಡಿಯಲ್ಲಿ ಕೆಲವೊಂದು ಷರತ್ತುಗಳಿಗೆ ಒಳಪಟ್ಟು ಸರ್ಕಾರವು ಉದ್ದೇಶ ಪೂರ್ವಕವಾಗಿ ಉಂಟು ಮಾಡಿದ ಅಥವಾ ಗುರಿಪಡಿಸಿದ ಗಾಯ ಅಥವಾ ತನ್ನ ಕಚೇರಿ ಕೆಲಸ ನಿರ್ವಹಣೆ ಸಂದರ್ಭದಲ್ಲಿ ಆದ ಗಾಯದಿಂದ ಅಂಗವಿಕಲನಾದ ಖಾಯಂ ಅಥವಾ ತಾತ್ಕಾಲಿಕ ನೌಕರನಿಗೆ ಅಂಗವಿಕಲ ರಜೆಯನ್ನು ಮಂಜೂರು ಮಾಡಬಹುದು.
ಈ ಘಟನೆ ನಡೆದು ಮೂರು ತಿಂಗಳ ಒಳಗಡೆ ಗಮನಕ್ಕೆ ತರಬೇಕು ಇಲ್ಲದಿದ್ದರೆ ರಜೆ ಮಂಜೂರು ಮಾಡುವುದಕ್ಕೆ ಬರುವುದಿಲ್ಲ. 3 ತಿಂಗಳ ನಂತರ ಅಂಗವೈಕಲ್ಯ ಸಂಭವಿಸಿದರೆ ಸರ್ಕಾರ ರಜೆ ಮಂಜೂರು ಮಾಡುವಂತಿಲ್ಲ.ವೈದ್ಯಕೀಯ ಪ್ರಮಾಣಪತ್ರವಿಲ್ಲದೇ ಸರದಿ ರಜೆ ಮಂಜೂರು ಮಾಡುವಂತಿಲ್ಲ. ಇಂಥ ಸಂದರ್ಭದಲ್ಲಿ ಗರಿಷ್ಠ 24 ತಿಂಗಳು ರಜೆ ಮಂಜೂರು ಮಾಡಬಹುದು. ಮೊದಲ 120 ದಿನಗಳಿಗೆ ಪೂರ್ಣ ವೇತನ ನೀಡುವುದು. ಉಳಿದ ಅವಧಿಗೆ ಅರ್ಧವೇತನ ಅಥವಾ ರಜೆಯಲ್ಲಿದ್ದ ವೇತನವನ್ನು ನೀಡಲಾಗು ತ್ತದೆ.ಸರ್ಕಾರದ ನಿಯಮದ 137ರ ಅಡಿಯಲ್ಲಿ ಸರ್ಕಾರಿ ನೌಕರನು ತನ್ನ ಹುದ್ದೆಗೆ ಸಂಬಂಧಪ ಟ್ಟಂತಹ ಸಾಮಾನ್ಯ ಅಪಾಯವನ್ನು ಮೀರಿದ ಗಾಯಕ್ಕೆ ತುತ್ತಾದಾಗ ಅಧಿಕೃತ ವೈದ್ಯಾಧಿಕಾರಿ ಶಿಫಾರಸ್ಸಿನ ಮೇರೆಗೆ 120 ದಿನ ಮೀರದಂತೆ ಅಂಗವೈಕಲ್ಯ ವಿಶೇಷ ರಜೆಯನ್ನು ಮಂಜೂರು ಮಾಡಬಹುದು.
ನಿಯಮ 138ರ ಅಡಿಯಲ್ಲಿ ಪೈಶು ವೈದ್ಯಕೀಯ ಇಲಾಖೆಯ ಲೈವ್ ಸ್ಟಾರ್ ಫಾರ್ಮ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ನೌಕರರು ತಮ್ಮ ನಿಯಮಬದ್ಧ ಕರ್ತವ್ಯಗಳನ್ನು ನಿರ್ವಹಿಸು ವಾಗ ಒದಗಿದ ಗಾಯಗಳಿಂದ ಕೆಲಸ ಮಾಡಲು ಅಸಮರ್ಥರಾದರೆ ಕರ್ನಾಟಕ ಪಶು ಸಂಗೋ ಪನಾ ನಿರ್ದೇಶಕರು ಜಿಲ್ಲಾ ವೈದ್ಯಾಧಿಕಾರಿಗಳು ನೀಡುವ ಪ್ರಮಾಣಪತ್ರದ ಆಧಾರದ ಮೇಲೆ ಭತ್ಯಸಹಿತ 30 ದಿನಗಳ ರಜೆಯನ್ನು ಪಡೆದುಕೊ ಳ್ಳಬಹುದು.