ಕುಂದಗೋಳ –
ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 51 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಶಾಲಾ ಅಭಿವೃದ್ಧಿ ಕಾಮ ಗಾರಿಗಳಿಗೆ ಗ್ರಾಮ ಪಂಚಾಯತ್ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು

1) ಎರಡು ಶಾಲೆಗೆ ಕಂಪೌಂಡ್ ನಿರ್ಮಾಣ
2) ಶಾಲಾ ಆವರಣಕ್ಕೆ ಪಿವರ್ಸ್ ಅಳವಡಿಸುವುದು
3) ಶಾಲೆಗೆ ಶೌಚಾಲಯ ನಿರ್ಮಾಣ
4) ಶಾಲೆಯಲ್ಲಿ ಆಟದ ಮೈದಾನ ನಿರ್ಮಾಣ
5) ಶಾಲಾ ಮಕ್ಕಳಿಗೆ ಊಟದ ಭೋಜನಾಲಯ ನಿರ್ಮಾಣ ಹೀಗೆ ಹಲವಾರು ಯೋಜನೆ ಗಳಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಖಾದರ್ ಸಾಬ್ ಹಳ್ಳಿಕೇರಿ ಗ್ರಾಮ ಪಂಚಾ ಯತ್ ಸದಸ್ಯರಾದ ಚಿದಾನಂದ ಪೂಜಾರ್ ಗ್ರಾಮದ ಹಿರಿಯರಾದ ಶಿವಾನಂದಯ್ಯ ಕುರುವತ್ತಿಮಠ ಶಿವಾನಂ ದಪ್ಪ ಹಕಾರಿ ಯಲ್ಲಪ್ಪ ಮಸನಾಳ.ಗುರುಸಿದ್ದಪ್ಪ ಗೋಪಾಳಿ
ಕಡಪಟ್ಟಿ ಗ್ರಾಮ ಹಿರಿಯರಾದ ತಿಪ್ಪಣ್ಣ ಪಲ್ಲೇದ್. ಮುದು ಕಪ್ಪ ಗೋಪಾಳಿ ಮತ್ತಿತರು ಉಪಸ್ಥಿತರಿದ್ದರು