ಚಿಕ್ಕೊಡಿ –
ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ ಆದರೆ ಇಲ್ಲೊಬ್ಬ ಸರ್ಕಾರಿ ಅಧಿಕಾರಿ ಒಳ್ಳೆಯ ಹುದ್ದೆಯಲ್ಲಿ ದ್ದರೂ ಮಾಡಬಾರದ ಕೆಲಸವನ್ನು ಮಾಡಿ ಮಾಡಿದ ತಪ್ಪಿಗಾಗಿ ಕಚೇರಿಯಲ್ಲಿಯೇ ಧರ್ಮದೇಟು ತಿಂದು ಈ ಮೂಲಕ ಸರ್ಕಾರಿ ಹುದ್ದೆಯ ಘನತೆಗ ಧಕ್ಕೆ ತಂದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.
ಬೆಳಗಿನ ಜಾವ ಕಚೇರಿಗೆ ಆಗಮಿಸಿದ್ದ ಮಹಿಳೆ ಒಬ್ಬರಿಗೆ ಉಪತಹಶಿಲ್ದಾರ ಡಿ ಎಸ್ ಜಮಾದಾರ ತನ್ನ ಗುಪ್ತಾಂಗ ತೋರಿಸಿದ್ದು ಸದ್ಯ ಆ ಮಹಿಳೆಯ ಸಂಭಂಧಿಕರು ಕಚೇರಿಗೆ ನುಗ್ಗಿ ಉಪತಹಶಿಲ್ದಾರ ಮೇಲೆ ಹಲ್ಲೆ ಮಾಡುವ ಮೂಲಕ ವಿಕೋಪಕ್ಕೆ ಹೋಗಿದೆ.ಅಸಭ್ಯವಾಗಿ ವರ್ತನೆ ಮಾಡುವ ಚಾಳಿಯನ್ನು ಮುಂದುವರೆಸಿದ ಬೆನ್ನಲ್ಲೆ ಬಿಸಿಬಿಸಿ ಕಜ್ಜಾಯ ನೀಡಲಾಗಿದ್ದು ಕಳೆದ ಎರಡು ವರ್ಷದ ಹಿಂದೆಯೂ ಇದೇ ರೀತಿ ಅಸಭ್ಯ ವರ್ತನೆ ಮಾಡಿದ್ದ ಆರೋಪಗಳು ಈ ಒಂದು ಅಧಿಕಾರಿಯ ಮೇಲೆ ಕೇಳಿ ಬಂದಿದ್ದವು.
ಈ ವೇಳೆ ಮೇಲಾಧಿಕಾರಿಗಳು ಕೇವಲ ನೋಟಿಸ್ ನೀಡಿ ಮೌನವಾಗಿದ್ದರು.ಇಂದು ಮದ್ಯಾಹ್ನ ಕೂಡ ಉಪತಹಶಿಲ್ದಾರ ಡಿ ಎಸ್ ಜಮಾದಾರ ಮತ್ತೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪವನ್ನು ಮಹಿಳೆ ಮಾಡಿದ ಬಳಿಕ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವದಾಗಿ ಚಿಕ್ಕೋಡಿ ತಹಶೀಲ್ದಾರ ಜೈನ್ ಅವರು ಹೇಳಿದ್ದ ರಿಂದ ಮನೆಗೆ ತೆರಳಿದ್ದ ಮಹಿಳೆಯ ಮನೆಯವರು ವಿಷಯ ತಿಳಿದು ತಹಶೀಲ್ದಾರ ಕಚೇರಿಗೆ ಆಗಮಿಸಿದ ವೇಳೆ ಮಹಿಳೆಯರು ಮತ್ತು ಪುರುಷರಿಂದ ಉಪತಹಶೀಲ್ದಾರ ಡಿ ಎಸ್ ಜಮಾದಾರಗೆ ಚಪ್ಪಲಿ ಸೇವೆ ಮಾಡಿದ್ದಾರೆ.
ಈ ವೇಳೆ ಅಲ್ಲಿನ ಸಿಬ್ಬಂದಿ ಮತ್ತು ಪೋಲಿಸರ ಮಧ್ಯಸ್ಥಿಕೆಯಲ್ಲಿ ಜಗಳ ಬಿಡಿಸಲಾಗಿದ್ದು ಘಟನೆ ಸಂಭಂದ ಇಬ್ಬರು ವ್ಯಕ್ತಿಗಳು ಮತ್ತು ಉಪತಹಶೀ ಲ್ದಾರ ಅವರನ್ನು ಪೋಲಿಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸಿದ್ದಾರೆ.
ಒಟ್ಟಾರೆ ಏನೇ ಆಗಲಿ ಏನಾದರೂ ಸರ್ಕಾರಿ ಕೆಲಸಕ್ಕೆ ಬಂದರೆ ಮಹಿಳೆಯರಿಗೆ ಹೀಗೆ ಮಾಡುವ ಕಾಮಚೇಷ್ಟೆಯ ಉಪ ತಹಶೀಲ್ದಾರ್ ಗೆ ಬುದ್ದಿ ಕಲಿಸಿದ ಮಹಿಳೆಯ ಕಾರ್ಯ ಮೆಚ್ಚುವಂತಹದ್ದು ಇಲ್ಲವಾದರೆ ಕಚೇರಿಗೆ ಬರುವವರಿಗೆ ಹೀಗೆ ಮಾಡುತ್ತಿದ್ದನು.