ಪದವೀಧರ ಶಿಕ್ಷಕರಿಗೆ ಪರೀಕ್ಷೆ ಇಲ್ಲದೇ ಅವರನ್ನು ಮುಂಬಡ್ತಿ ಗೊಳಿಸಿ ನಂತರ ಅವರುಗಳಿಗೆ ತರಬೇತಿ ನೀಡಲಾಗುತ್ತದೆ ಬಿ ಸಿ ನಾಗೇಶ್ ಸಂತೋಷದ ಸುದ್ದಿ ನೀಡಿದರು ಶಿಕ್ಷಣ ಸಚಿವರು…..

Suddi Sante Desk

ಕೆ ಆರ್ ಪೇಟೆ –

ಪಧವೀಧರ ಶಿಕ್ಷಕರ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ಪರೀಕ್ಷೆ ಇಲ್ಲದೇ ಅವರನ್ನು ಮುಂಬಡ್ತಿಗೊಳಿಸಿ ನಂತರ ಅವರುಗಳಿಗೆ ತರಬೇತಿ ನೀಡಲು ಕ್ರಮವಹಿಸಲಾಗುವುದು ಎಂದು ಬಿ‌ ಸಿ ನಾಗೇಶ್ ಹೇಳಿದರು ಕೆ ಆರ್ ಪೇಟೆ ಯ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಜಯಮ್ಮರಾಮ ಸ್ವಾಮಿ ಸಮುದಾಯ ಭವನದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ಶೈಕ್ಷಣಿಕ ವಿಚಾರ ಗೋಷ್ಟಿ ಹಾಗೂ ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಮುಂದಿನ ಸ್ವಾವಲಂಬನೆಯ ಬದುಕನ್ನು ಅಭಿವೃದ್ದಿಪಡಿಸಲು ಹಾಗೂ ಕೌಶಲ್ಯಾಧಾರಿತವಾಗಿ ಶಿಕ್ಷಣವನ್ನು ರೂಪಿಸಲಾಗಿದೆ ಎಂದರು

ಇನ್ನೂ ಕೋವಿಡ್ ಸಮಯದಲ್ಲಿ ತಜ್ಞರು ಏನೇ ಎಚ್ಚರಿಕೆ ಕೊಟ್ಟರೂ ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಒಬ್ಬರೇ ಶಿಕ್ಷಕರು ಶಾಲಾ ಪ್ರಾರಂಭೋತ್ಸವಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ ಅದು ನನ್ನ ಇಲಾಖೆಗೆ ನೀವು ನೀಡುತ್ತಿ ರುವ ಸಹಕಾರ ಎಂಥದ್ದು ಎನ್ನುವುದನ್ನು ಸೂಚಿಸುತ್ತದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕೆಲಸವನ್ನೂ ಮಾಡಿರುವ ನಿಮಗೆ ಅಭಿನಂದನೆಗಳು ಪಧವೀಧರ ಶಿಕ್ಷಕರ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ಪರೀಕ್ಷೆ ಇಲ್ಲದೇ ಅವ ರನ್ನು ಮುಂಬಡ್ತಿಗೊಳಿಸಿ ನಂತರ ಅವರುಗಳಿಗೆ ತರಬೇತಿ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಇನ್ನೂ ಈ ಒಂದು ಕಾರ್ಯಕ್ರಮ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ,ಸಚಿವ ಕೆ.ಸಿ.ನಾರಾಯಣಗೌಡ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷ ಶಂಭುಲಿಂಗನಗೌಡ ಪಾಟೀಲ್, ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ,ಉಪಾದ್ಯಕ್ಷ ಕೆ.ನಾಗೇಶ್,ತಹಶೀ ಲ್ದಾರ್ ಎಂ.ವಿ.ರೂಪ, ಪುರಸಭಾ ಅಧ್ಯಕ್ಷೆ ಮಹಾದೇವಿ ನಂಜುಂಡ, ಪ್ರೊ.ಪಿ.ಕೆ.ರಾಜಶೇಖರ್, ಉಪನಿರ್ದೇಶಕ ಕೆ.ಜವರೇಗೌಡ,ಜಿಲ್ಲಾ ಪ್ರಾ.ಶಾ.ಶಿ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರವಿಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಸವ ರಾಜು, ಪುರಸಭಾ ಮುಖ್ಯಾಧಿಕಾರಿ ಕುಮಾರ್, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಅಂ.ಚಿ.ಸಣ್ಣಸ್ವಾಮಿಗೌಡ ಸೇರಿದಂತೆ ತಾಲ್ಲೂಕಿನ ಶಿಕ್ಷಕ ಸಮೂಹ ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.