ಧಾರವಾಡ – ಗ್ರಾಮ ಪಂಚಾಯತಿ ಗೆ ಸ್ಪರ್ಧೆ ಮಾಡಿದ ಅಭ್ಯರ್ಥಿಗಳ ಪೊಟೊ ಹಾಕಿ ವಾಮಾಚಾರ ಮಾಡಲಾಗಿದೆ. ಹೌದು ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ವಾಮಾಚಾರ ಮಾಡಿರುವ ವಸ್ತಗಳು ಪತ್ತೆಯಾಗಿವೆ.
ಹೀಗೆ ಪತ್ತೆಯಾಗಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಗ್ರಾಮದ ಹಲವರ ಪೊಟೊ ಗಳನ್ನು ವಾಮಾಚಾರಕ್ಕೆ ಬಳಕ್ಕೆ ಮಾಡಲಾಗಿದೆ. ಇದರಿಂದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.
ಈಗಾಗಲೇ ಗ್ರಾಮದಲ್ಲಿ ಪಂಚಾಯತಿ ಚುನಾವಣೆ ನಡೆಯುತ್ತಿದ್ದು, ಇದು ಪಂಚಾಯತ್ ಚುನಾವಣೆ ಸ್ಥಾನವನ್ನು ಗೆಲ್ಲಲು ಮಾಡಿರುವ ಕೃತ್ಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಅಲ್ಲದೆ ವಾಮಾಚಾರಕ್ಕೆ ಬಳಸಿದ ಬ್ಲ್ಯಾಕ್ ಗೊಂಬೆಯ ಮೇಲೆ ಕೋಟೂರು ಗ್ರಾಮ ಪಂಚಾಯತಿಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಎಂದು ಹೇಳಲಾಗುತ್ತಿದೆ. ಕಳೆದ ಹಲವು ದಶಕಗಳಿಂದ ಪಂಚಾಯತಿ ಚುನಾವಣೆ ಮಾಡಲಾಗುತ್ತಿದೆ.
ಇಷ್ಟು ವರ್ಷಗಳ ಇಂತಹ ಯಾವುದೇ ವಸ್ತಗಳು ಗ್ರಾಮದಲ್ಲಿ ಕಂಡು ಬಂದಿಲ್ಲಾ. ಇದೇ ಮೊದಲ ಬಾರಿಗೆ ಈ ರೀತಿಯಾದ ಕೃತ್ಯ ನಡೆದಿದೆ. ಇದೂ ಪಂಚಾಯತಿ ಚುನಾವಣೆ ದೃಷ್ಟಿ ಇಟ್ಟುಕೊಂಡು ಮಾಡಿರುವುದು ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.Except
ಅಲ್ಲದೆ ವಾಮಾಚಾರ ಮಾಡಿರುವ ಬ್ಲ್ಯಾಕ್ ಕಲರ ಗೊಂಬೆಯ ಮೇಲೆ ಸುತ್ತಲ್ಲಾದ ದಾರವನ್ನು ಬೀಡಿಸುತ್ತಾ ಹೋದಾಗ ಅದರ ಮೇಲ್ಭಾಗದಲ್ಲಿ ನಾಲ್ಕೈದು ಪೋಟೋಗಳು ಪತ್ತೆಯಾಗಿವೆ. ಇದು ಗ್ರಾಮಸ್ಥರನ್ನು ಮತ್ತಷ್ಟು ಆತಂಕ ಮೂಡಿಸುವಂತೆ ಮಾಡಿದೆ.ಇಂತಹ ಕೃತ್ಯ ಮಾಡಿರುವವರನ್ನು ಪೊಲೀಸ ಇಲಾಖೆ ಸುಮ್ಮನೆ ಬೀಡಬಾರದು ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.