ಅಮ್ಮಿನಬಾವಿ –
ಉಚಿತ ಸೇವೆಗಾಗಿ ಕಾರವೊಂದನ್ನು ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರು ಕೊಟ್ಟ ಘಟನೆ ಧಾರವಾಡದ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ ಅಮ್ಮಿನಭಾವಿ ಪಂಚಾಯತಿ ಸದಸ್ಯೆ ಪದ್ಮಾವತಿ. ಕೊರೋನಾ ಹಿನ್ನೆಲೆ ತಮ್ಮ ಸ್ವಂತ ಕಾರನ್ನು ತನ್ನ ವಾರ್ಡ್ ಜನರ ತುರ್ತು ಸೇವೆಗೆ ಉಚಿತವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಅಮ್ಮಿನಭಾವಿ ಗ್ರಾ.ಪಂ ಸದಸ್ಯೆ ಪದ್ಮಾವತಿ ತವನಪ್ಪ ದೇಸಾಯಿ ಧಾರವಾಡ ತಾಲೂಕ ಅಮ್ಮಿನಭಾವಿ ಗ್ರಾಮ ಪಂಚಾಯತಿಯ 6 ನೆ ವಾರ್ಡ್ ನ ಸದಸ್ಯರಾ ಗಿದ್ದು ಕೋರೋನಾ ಸೋಂಕಿನ ನಿಮಿತ್ತವಾಗಿ ತಮ್ಮ 6 ನೆ ವಾರ್ಡಿನಲ್ಲಿ ಸಂಭಂಧಿಸಿ ದಂತೆ ಕೋರೋನ ಹಾಗೂ ಇನ್ನಿತರ ಅನಾರೋಗ್ಯದಿಂದ ಬಳಲುತ್ತಿರುವ ವರ ಚಿಕಿತ್ಸೆಗೆ ತಮ್ಮ ಸ್ವಂತ ಕಾರನ್ನು ಉಚಿತವಾಗಿ ಹುಬ್ಬಳ್ಳಿ ಧಾರವಾಡ ಆಸ್ಪತ್ರೆಗಳಿಗೆ ರವಾನಿಸಲು ತಮ್ಮ ಕಾರನ್ನು ಸೇವೆಗೆ ಮೀಸಲಾಗಿ ಇರಿಸಿದ್ದಾರೆ
ಈಗಿನ ಕಾಲದಲ್ಲಿ ತಮ್ಮ ಹಿತಾಸಕ್ತಿಗಾಗಿ ಆಸ್ತಿ ಪಾಸ್ತಿ ಮಾಡುವ ಜನಪ್ರತಿನಿಧಿಗಳೇ ಹೆಚ್ಚಾಗಿದ್ದು ಅಂತವರ ನಡುವೆ ಹಿಂತಹ ಸಮಯದಲ್ಲಿ ತಮ್ಮ ಸ್ವ ಖರ್ಚಿ ನಿಂದ ತಮ್ಮ ಕಾರನ್ನು ಸೇವೆಗೆ ಬಿಟ್ಟು ಜನಪರ ಆರೋಗ್ಯಕ್ಕಾಗಿ ಕಾಳಜಿ ವಹಿಸಿದ್ದಾರೆ ಮುಖ್ಯವಾಗಿ ಗ್ರಾಮ ಪಂಚಾಯತಿ ಸದಸ್ಯರು ಹೇಳುವ ಪ್ರಕಾರ ಎಲ್ಲವನ್ನೂ ಎಲ್ಲವನ್ನೂ ಸರ್ಕಾರವೇ ಮಾಡಬೇಕಂತಿ ಲ್ಲಾ ಸರ್ಕಾರದ ಜೊತೆ ನಾವು ಸಹ ಇಂತಹ ಅಳಿಲು ಸೇವೆಯನ್ನು ಮಾಡಿದ್ದೆ ಆದರೆ ಕೋರೋಣ ಮುಕ್ತ ವಾರ್ಡಿನ ಜೊತೆ ಗ್ರಾಮ ತಾಲೂಕು,ಜಿಲ್ಲಾ ,ರಾಜ್ಯ ಹಾಗೂ ದೇಶದಲ್ಲಿ ಕೋರೋನಾ ಮುಕ್ತ ಮಾಡುವು ದಕ್ಕೆ ಎಲ್ಲಾ ಜನಪ್ರತಿನಿಧಿಗಳು ಮುಂದೆ ಬಂದಿದ್ದೆ ಆದರೆ ದೇಶದ ಜನರ ಆರೋಗ್ಯ ಕಾಯೋದು ಆಸಾ ದ್ಯವಾದ ಮಾತೇನಲ್ಲ ಎಂಬುದು ಇವರ ಮಾತಾಗಿ ದೆ. ಇವರ ಕಾರ್ಯವನ್ನು ಮೆಚ್ಚಿದ ತಾಲ್ಲೂಕು ಸದಸ್ಯ ಸುರೇಂದ್ರ ದೇಸಾಯಿ ಪರಮೇಶ್ವರ ಅಕ್ಕಿ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರ ಸೇವಾ ಸಂಸ್ಥೆಯ ಗೌರವಾದ್ಯಕ್ಷರಾದ ಭೀಮಪ್ಪ ಕಾಸಾಯಿ, ಅಜೀತಸಿಂಗ ರಜಪೂತ, ಮಂಜುನಾಥ ವಾಸಂಬಿ,ಎಲ್ ಐ ಲಕ್ಕಮ್ಮನವರ ಸೇರಿದಂತೆ ಗ್ರಾಮದ ಹಿರಿಯರಾದ ಮಂಜುನಾಥ ದೇವರಮನಿ, ಕಲ್ಲಪ್ಪ ಪೂಜಾರ, ಗುರುಬಸವ ಗೊಬ್ಬರಗುಂಪಿ, ಬಸವರಾಜ ಯಲಿವಾಳ,ಪರಮೇಶ್ವರ ಹೂಲಿ, ಬಸವನ್ನೆಪ್ಪ ಪೂಜಾರ, ಮಲ್ಲಿಕಾರ್ಜುನ ಧನಸನ್ನ ವರ,ಬಸವರಾಜ ಮುಂತಾದವರು ಇವರ ಕಾರ್ಯ ವನ್ನು ಶ್ಲಾಘಿಸಿದ್ದಾರೆ.