ಗ್ರಾಮ ಪಂಚಾಯತಿ ಅವ್ಯವಹಾರ ಖಂಡಿಸಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ

Suddi Sante Desk

ಹುಬ್ಬಳ್ಳಿ –

ಗ್ರಾಮ ಪಂಚಾಯತಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಧಾರವಾಡದ ಕುಂದಗೋಳ ಪಟ್ಟಣದಲ್ಲಿ ಪ್ರತಿಭಟನೆ ನಡೆಯುತ್ತಿದೆ‌. ಮಾಜಿ ಗ್ರಾಮ ಪಂಚಾಯತಿ ಸದಸ್ಯ ಸಿದ್ದಪ್ಪ ಕಳಸನ್ನವರ ಪಂಚಾಯತಿನಲ್ಲಿನ ಅವ್ಯವಹಾರ ಖಂಡಿಸಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭ ಮಾಡಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮ ಪಂಚಾಯತಿ ಮುಂದೆ ಧರಣಿ ನಡೆಯುತ್ತಿದೆ.ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶಿದ್ದಪ್ಪ ಕಳಸಣ್ಣವರ ಅವರಿಂದ ಈ ಒಂದು ಪ್ರತಿಭಟನೆ ನಡೆಯುತ್ತಿದೆ.

ಕಳೆದ ಮೂರು ದಿನಗಳಿಂದ ಅಹೋರಾತ್ರಿಯ ಅಮರಣ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಪ್ರತಿಭಟನೆಗೆ ವಿವಿಧ ಸಂಘಟನೆಗಳು ಸಾಥ್ ನೀಡಿವೆ.ಕಳೆದ ಮೂರು ವರ್ಷಗಳಿಂದ ಅವ್ಯವಹಾರ ತನಿಖೆ ಮಾಡುವಂತೆ ಒತ್ತಾಯವನ್ನು ಮಾಡಲಾಗುತ್ತಿದೆ.

ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಸತ್ಯಾಗ್ರಹವನ್ನು ಮಾಡಲಾಗುತ್ತಿದೆ. ಮಹಾತ್ಮಗಾಂಧಿ ನರೇಗಾ ಯೋಜನೆ,ನಿಧಿ-೧ ಮತ್ತು ೧೪ ನೇ ಹಣಕಾಸು ವಸತಿ ಯೋಜನೆಯಲ್ಲಿ ಬಾರಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಈ ಒಂದು ಪ್ರತಿಭಟನೆಯನ್ನು ಮಾಡಲಾಗುತ್ತಿದೆ.

ಸತ್ತವರ ಹೆಸರಿನಲ್ಲೂ ಮನೆಯ ಬಿಲ್ಲನ್ನು ತೆಗೆದಿರುವ ಪಂಚಾಯತಿ ಅಧಿಕಾರಿಗಳು.೨೦೧೭ ರಿಂದ ಲೋಕಾಯುಕ್ತರಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತನಿಖೆ ಮಾಡುವಂತೆ ಅಲೆದಾಡಿದ ಶಿದ್ದಪ್ಪ.ಅಧಿಕಾರಿಗಳ ಹಾರಿಕೆಯ ಉತ್ತರದಿಂದ ಬೇಸತ್ತು ಧರಣಿ ಆರಂಭ ಮಾಡಿದ್ದಾರೆ.

ಜಿಲ್ಲಾಧಿಕಾರಿ ಬಂದು ತಪ್ಪಿತಸ್ಥರ ವಿರುದ್ದ ಕ್ರಮವನ್ನು ಕೊಳ್ಳುವವರೆಗೂ ಧರಣಿ ಯಿಂದ ಹಿಂದೆ ಯಾವುದಕ್ಕೂ ಸರಿಯೊದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿಯಿಂದಲೂ ಧರಣಿಗೆ ಬೆಂಬಲ ಕಂಡು ಬಂದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.