ಹುಬ್ಬಳ್ಳಿ –
ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಾ ನಾಗರಿಕ ಸ್ನೇಹಿ ಪೊಲೀಸ್ ಕಾರ್ಯ ನಿರ್ವಹಿಸುತ್ತಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಸಿಬ್ಬಂದಿ ಬೆಳಗಲಿ ಕ್ರೈಂ ಹೆಡ್ ಕಾನ್ಸ್ ಟೇಬಲ್ ನಾರಾಯಣ ಹಿರೇಹೊಳಿ ಹಾಗೂ ಮಂಜುನಾಥ್ ಕಾನ್ಸ್ ಟೇಬಲ್ ಮಂಜುನಾಥ್ ಹೇಳವರ್ ಅವರಿಗೆ ಗ್ರಾಮ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು

ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿ ರುವ ಹಿನ್ನಲೆಯಲ್ಲಿ ಬೆಳಗಲಿ ಗ್ರಾಮಸ್ಥರು ಕೊಡ ಮಾಡುವ ಪ್ರಶಸ್ತಿ ಇದಾಗಿದ್ದು ಇಲಾಖೆ ಗೌರವ ಹೆಚ್ಚಿಸಿದೆ.

ಈ ವೇಳೆ ಮಾತನಾಡಿದ ಹೆಡ್ ಕಾನ್ಸ್ ಟೇಬಲ್ ನಾರಾಯಣ ಹಿರೆಹೋಳಿ ಗ್ರಾಮೀಣ ಪ್ರದೇಶದಲ್ಲಿ ಕಾನೂನಿನ ಅರಿವಿನ ಅಗತ್ಯವಿದ್ದು ಸಹಾಯ ಬೇಕಾದಲ್ಲಿ ಮುಕ್ತವಾಗಿ ಪೊಲೀಸರನ್ನು ಸಂಪರ್ಕಿಸು ವಂತೆ ಕೇಳಿಕೊಂಡರು ಅಲ್ಲದೆ ಯುವಕರಿಗೆ ಉತ್ತಮ ಓದು ಬರಹ ದೊಂದಿಗೆ ಜೀವನ ರೂಪಿಸಿಕೊಳ್ಳು ವಂತೆ ಸಲಹೆ ನೀಡಿದರು
