ಧಾರವಾಡ –
ಅಜ್ಜಿ ಪ್ರತಿನಿಧಿಸಿದ್ದ ವಾರ್ಡ್ ನಲ್ಲಿ ಮೊಮ್ಮಗಳು ಸ್ಪರ್ಧೆ ಮಾಡಿ ಗೆಲವು ಸಾಧಿಸಿದ್ದಾರೆ. ಹೌದು ಧಾರವಾಡ ತಾಲ್ಲೂಕಿನ ರಾಮಾಪೂರ ಗ್ರಾಮದಲ್ಲಿ ಇಂಥಹದೊಂದು ವಿಶೇಷ ಫಲಿತಾಂಶ ಹೊರಬಿದ್ದಿದೆ. ಧಾರವಾಡ ತಾಲೂಕು ರಾಮಾಪುರದಲ್ಲಿ 21 ವರ್ಷದ ಲಕ್ಷ್ಮೀ ಮಾದರ ಗೆಲುವು ಸಾಧಿಸಿದ್ದಾರೆ.

ರಾಮಾಪುರ ವಾರ್ಡ್ 1 ರಿಂದ ಸ್ಪರ್ಧಿಸಿದ್ದರು ಲಕ್ಷ್ಮೀ. ಈ ಹಿಂದೆ ಲಕ್ಷ್ಮೀಯವರ ಅಜ್ಜಿ ರುಕ್ಮವ್ವ ಈ ಒಂದು ವಾರ್ಡ್ ನ್ನು ಪ್ರತಿನಿಧಿಸಿದ್ದರು. ಸಧ್ಯ ಅವರ ಬದಲಿಗೆ ಈಗ ಲಕ್ಷ್ಮೀಯವರು ಸ್ಪರ್ಧೆ ಮಾಡಿದ್ದಾರೆ.ಅಜ್ಜಿ ಬದಲಿಗೆ ಚುನಾವಣೆಗೆ ಸ್ಪರ್ಧಿಸಿ ಕೊನೆಗೂ ಗೆದ್ದಿದ್ದಾರೆ ಮೊಮ್ಮಗಳು ಲಕ್ಷ್ಮೀ. ಈವರೆಗೆ ಪಂಚಾಯತನಲ್ಲಿ ಅಜ್ಜಿಯ ಅಧಿಕಾರ ಕಂಡು ಬರುತ್ತಿತ್ತು ಈಗ ಲಕ್ಷ್ಮೀ ಆಡಳಿತ ಆರಂಭವಾಗಲಿದೆ.