ಹುಬ್ಬಳ್ಳಿ –
ಮೊದಲ ಅಲೆ ಮುಗಿದು ಎರಡನೇ ಅಲೆಯ ಮುಗಿಯುವ ಮುನ್ನವೇ ಮೂರನೇ ಅಲೆಯು ವಕ್ಕರಿಸುತ್ತಿದ್ದು ಜನರು ಮಾತ್ರ ಇನ್ನೂ ಜಾಗರೂಕರಾಗಿಲ್ಲ. ಸಾರ್ವಜನಿಕರಿಗೆ ವ್ಯಾಕ್ಸಿನ್ ನೀಡಲು ವೈದ್ಯಕೀಯ ಸಿಬ್ಬಂದಿಗಳು ಹರಸಾಹಸ ವನ್ನೇ ಮಾಡಬೇಕಾಗಿದ್ದು ಇದಕ್ಕೆ ಹುಬ್ಬಳ್ಳಿಯಲ್ಲಿ ಕಂಡು ಬಂದ ಚಿತ್ರಣ
ಹೌದು ಧಾರವಾಡ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಎಲ್ಲರೂ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಹುಬ್ಬಳ್ಳಿಯ ಜನತಾ ಬಜಾರ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಮಾಡುವವರ ಬಳಿ ತೆರಳಿ ವ್ಯಾಕ್ಸಿನ ನೀಡಲಾಗುತ್ತಿದೆ. ಆದರೆ ವ್ಯಾಕ್ಸಿನ್ ನೀಡುವ ವೇಳೆಯಲ್ಲಿ ಅಜ್ಜಿಯೊಬ್ಬರು ದೊಡ್ಡ ರಾದ್ದಾಂತವನ್ನೇ ಮಾಡಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ.
ಬೀದಿ ಬದಿ ತರಕಾರಿ ಮಾರಾಟ ಮಾಡುವ ಅಜ್ಜಿ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೆಟು ಹಾಕುತ್ತಿದ್ದಳು.ಅಕ್ಕ ಪಕ್ಕದ ವ್ಯಾಪಾರಸ್ಥರು ಸೇರಿಕೊಂಡು ಅಜ್ಜಿಗೆ ವ್ಯಾಕ್ಸಿನ ನೀಡಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಸ್ಪತ್ರೆ ಸಿಬ್ಬಂದಿ ಅಜ್ಜಿಗೆ ವ್ಯಾಕ್ಸಿನ ನೀಡಿದ್ದಾರೆ.ಸದ್ಯ ಈ ವಿಡಿಯೋ ಎಲ್ಲೆಡೆ ಇದೀಗ ವೈರಲ್ ಆಗಿದ್ದು,ಇನ್ನೂ ಎಷ್ಟು ಅಲೆ ಬಂದರೂ ನಮ್ಮ ಜನರು ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟು ಹಾಕುವುದಂತೂ ಸತ್ಯ..