ರಾಯಚೂರು –
ನಾಪತ್ತೆಯಾಗಿದ್ದ ಮಾಜಿ ಶಾಸಕರ ಇಬ್ಬರು ಮೊಮ್ಮಕ್ಕಳು ಶವವಾಗಿ ಪತ್ತೆಯಾದ ಘಟನೆ ರಾಯಚೂರಿನಲ್ಲಿ ನಡೆದಿದೆ.ಮಾನ್ವಿ ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಇಬ್ಬರು ಮೊಮ್ಮಕ್ಕಳು ನಿನ್ನೆ ಮದ್ಯಾಹ್ನ ನಾಪತ್ತೆಯಾಗಿದ್ದರು.ಇಂದು ಬೆಳಗ್ಗೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಹಳ್ಳದಲ್ಲಿ ಇಬ್ಬರು ಚಾಲಕರು ಶವವಾಗಿ ಪತ್ತೆಯಾಗಿದ್ದಾರೆ.

9 ವರ್ಷದ ವರುಣ್ ಹಾಗೂ 5 ವರ್ಷದ ಸಣ್ಣಯ್ಯ ಶವವಾಗಿ ಪತ್ತೆಯಾಗಿದ್ದಾರೆ.ಆಟವಾಡಲು ಹೋದಾಗ ನಾಪತ್ತೆಯಾಗಿದ್ದರು ಈ ಇಬ್ಬರು ಬಾಲಕರು.ಬಾಲಕನಿಗಾಗಿ ನಿನ್ನೆಯಿಂದ ಸಿರವಾರ ಹಾಗೂ ಕವಿತಾಳ ಪೋಲೀಸರು ತೀವ್ರ ಹುಡುಕಾಟ ನಡೆಸಿದ್ದರು.

ಇಂದು ಬೆಳಗಾಗುತ್ತಿದ್ದಂತೆ ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ.ಇನ್ನೂ ಬಾಲಕರ ನಿಧನದಿಂದಾಗಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಕಂಡು ಬಂದಿತು.

ಇನ್ನೂ ಈ ಕುರಿತು ಸಿರವಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.