ಬೆಂಗಳೂರು –
ರಾಜ್ಯದ ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ,ಶಿಕ್ಷಕರ ಕೊರತೆ ನೀಗಿಸುವುದು ಮತ್ತು ಕಲಿಕಾ ಚಟುವಟಿಕೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥಗೆಳ (ಎನ್‌ಜಿಒ)ಸಾಮಾಜಿಕ ಹೊಣೆಗಾರಿಕಾ ನಿಧಿ (ಸಿಎಸ್‌ಆರ್)ಅನುದಾನವನ್ನು ನನ್ನ ಶಾಲೆ ನನ್ನ ಕೊಡುಗೆ ಯೋಜನೆ ಅಡಿ ಸಮರ್ಪಕವಾಗಿ ಬಳಸಿಕೊಳ್ಳಲು ಶಿಕ್ಷಣ ಇಲಾಖೆಯು ನೂತನ ಆಯಪ್ ಪೋರ್ಟಲ್ ಅನ್ನು ಸಿದ್ಧಪಡಿಸಿದ್ದು ಫೆಬ್ರವರಿ 14 ರಂದು ಮುಖ್ಯಮಂತ್ರಿ ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ
ಹೌದು ರಾಜ್ಯಾದ್ಯಂತ ಸರಕಾರಿ ಶಾಲೆಗಳಲ್ಲಿ ಅವಶ್ಯ ವಿರುವ ಸೌಲಭ್ಯದ ಮಾಹಿತಿ ಆಯಪ್‌ನಲ್ಲಿ ಲಭ್ಯವಾಗ ಲಿದೆ. ದಾನಿಗಳು ಹಣದ ಮೂಲಕ ಅಥವಾ ಶಾಲೆಗಳಿಗೆ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ಮೂಲಕವೂ ಸೌಲಭ್ಯ ಕಲ್ಪಿಸಬಹುದಾಗಿದೆ. ಈ ಆಯಪ್‌ನ್ನು ಫೆ. 14 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಕೆಲವು ಎನ್‌ಜಿಒಗಳು ಶಾಲೆಗಳಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂಬ ಮನಸ್ಸು ಹೊಂದಿರುತ್ತವೆ.ಆದರೆ,ಏನು ಮಾಡಬೇಕೆಂಬ ಗೊಂದಲವಿರುತ್ತದೆ. ಈ ಆಯಪ್ ಮೂಲಕ ರಾಜ್ಯಾದ್ಯಂತ ಸರಕಾರಿ ಶಾಲೆಗಳಲ್ಲಿ ಆವಶ್ಯ ವಿರುವ ಸೌಲಭ್ಯ ದ ಮಾಹಿತಿ ಲಭ್ಯವಾಗಲಿದೆ.ಸಂಬಂಧ ಪಟ್ಟ ಕಂಪೆನಿಗಳು ತಾವು ನೀಡಲಿಚ್ಛಿಸುವ ಸೌಲಭ್ಯವನ್ನು ಶಾಲೆಗಳಿಗೆ ನೀಡಬಹುದು ಎಂದು ಸಚಿವರು ತಿಳಿಸಿದರು.
2024-25ರ ವೇಳೆಗೆ 100 ಶಾಲೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ.ವರ್ಷಕ್ಕೆ ಕನಿಷ್ಠ 16 ಶಾಲೆಗಳ ಅಭಿವೃದ್ಧಿ ಗುರಿ ಹೊಂದಲಾಗಿದೆ.ಅಮೃತ ಮಹೋತ್ಸವ ಅಂಗವಾಗಿ 75 ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದ್ದು,ಶಾಲೆಗಳಿಗೆ ತಲಾ 10 ಲಕ್ಷ ರೂ.ಅನುದಾನ ನೀಡಲಾಗುತ್ತಿದೆ.ಹೆಚ್ಚಿನ ಮಕ್ಕಳು ಇರುವ ಶಾಲೆಗಳು ಮಳೆ ಹಾನಿಗೆ ಒಳಗಾಗಿ ತುರ್ತಾಗಿ ದುರಸ್ತಿಯಾಗಬೇಕಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಆಯುಕ್ತ ಡಾ ಆರ್. ವಿಶಾಲ್ ತಿಳಿಸಿದರು.