ಬೆಂಗಳೂರು –
ಪೋಷಕರಿಂದ ದೂರವಾಗಿ ಸ್ಪರ್ಶ ಟ್ರಸ್ಟ್ನಲ್ಲಿ ಆಶ್ರಯ ಪಡೆದು ಸರ್ಕಾರಿ ಶಾಲೆಯಲ್ಲಿ ಓದಿದ ಇಬ್ಬರು ಬಾಲಕಿಯರು SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ರಾಯಚೂರಿನ ರೇಣುಕಾ ಅವರು ತಂದೆಯ ಮರಣಾನಂತರ ಐದು ವರ್ಷದವರಿದ್ದಾಗ ಸ್ಪರ್ಶ ಟ್ರಸ್ಟ್ಗೆ ಸೇರ್ಪಡೆಯಾದರು.
ಅಂದಿನಿಂದ ಇಲ್ಲಿಯವರೆಗೂ ಬಾಲಕಿಯನ್ನು ಭೇಟಿ ಮಾಡಲು ಯಾರೂ ಬಂದಿಲ್ಲ. ಟ್ರಸ್ಟ್ ಆಶ್ರಯದಲ್ಲೇ ದೇವನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದಿದ ಅವರು 625ಕ್ಕೆ 511 ಅಂಕ ಗಳಿಸಿದ್ದಾರೆ. ಪಿಯುಸಿನಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ನಂತರ ಎಂಜಿನಿಯರ್ ಆಗುವ ಗುರಿ ಇಟ್ಟುಕೊಂಡಿದ್ದಾರೆ.
ಮಹಾರಾಷ್ಟ್ರದ ಸ್ವಪ್ನಾಲಿ ಮಹಾದೇವ್ ವಾಗ್ಮೋರ್ ಅವರು ತಂದೆ ತೊರೆದಿದ್ದರಿಂದಾಗಿ ತಾಯಿಯ ಜತೆ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮನೆಕೆಲಸ ಮಾಡುತ್ತಿ ದ್ದರು. 8ನೇ ತರಗತಿ ಓದಿದ್ದ ಅವರನ್ನು ಟ್ರಸ್ಟ್ ನೇರವಾಗಿ 10ನೇ ತರಗತಿಗೆ ದಾಖಲು ಮಾಡಿತ್ತು. ದೇವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದಿ 482 ಅಂಕ ಗಳಿಸಿದ್ದಾರೆ. ಕನ್ನಡ ಕಲಿತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……