This is the title of the web page
This is the title of the web page

Live Stream

[ytplayer id=’1198′]

June 2024
T F S S M T W
 12345
6789101112
13141516171819
20212223242526
27282930  

| Latest Version 8.0.1 |

ಧಾರವಾಡ

ಗೃಹಜ್ಯೋತಿ ಯೋಜನೆಗೆ ಧಾರವಾಡದಲ್ಲಿ ಚಾಲನೆ – ವಿಭಿನ್ನವಾಗಿ ಯೋಜನೆಗೆ ಚಾಲನೆ ನೀಡಿದ ಸಚಿವ ಸಂತೋಷ ಲಾಡ್ ಸಾಕ್ಷಿಯಾದರು ಶಾಸಕ NH ಕೋನರಡ್ಡಿ ಅಧಿಕಾರಿಗಳು…..

WhatsApp Group Join Now
Telegram Group Join Now

ಧಾರವಾಡ

ಬಡವರ ಉತ್ತಮ ಬದುಕಿಗೆ ಆದ್ಯತೆ
ಸರಕಾರದ ಜನಪರ ಯೋಜನೆಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯ ಸಚಿವ ಸಂತೋಷ ಲಾಡ್.

ರಾಜ್ಯ ಸರಕಾರವು ಬಡವರ ಉತ್ತಮ ಬದುಕಿಗೆ ಆದ್ಯತೆ ನೀಡಿದ್ದು ಜನಪರ ಯೋಜನೆಗಳ ಮೂಲಕ ಸಾಮಾಜಿಕ ಬದಲಾವಣೆ ತರಲು ಪ್ರಯತ್ನಿಸುತ್ತಿದೆ.ಶಕ್ತಿ ಯೋಜನೆ, ಅನ್ನ ಭಾಗ್ಯ, ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ, ಯುವನಿಧಿ ಅಂತಹ ನೂತನ ಯೋಜನೆಗಳನ್ನು ಜಾರಿಗೊಳಿ ಸುತ್ತಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಸೃಜನಾ ರಂಗಮಂದಿರದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹ ಜ್ಯೋತಿಗೆ ಚಾಲನೆ ನೀಡಿ ಮಾತನಾಡಿದರು

ರಾಜ್ಯಸರ್ಕಾರವು ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸಲು ಮೊದಲ ಆಧ್ಯತೆ ನೀಡಿದೆ.ಸುಮಾರು 60,000 ರೂ. ಕೋಟಿ ವೆಚ್ಚ ದಲ್ಲಿ ಪಂಚ ಯೋಜನೆಗಳನ್ನು ಅನುಷ್ಠಾನಗೊಳಿ ಸುತ್ತಿದೆ.ಬಡವರ ಪರ ಅಗತ್ಯವಿರುವ ಎಲ್ಲಾ ರೀತಿಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಬದ್ಧತೆ ಇದೆ ಎಂದು ಅವರು ಹೇಳಿದರು.

ಯುವಕರು ವಿಶೇಷವಾಗಿ ರಾಜಕೀಯಕ್ಕೆ ಬರ ಬೇಕು.ಯುವಕರಿಂದ ಸಾಮಾಜಿಕ,ಆರ್ಥಿಕ ಬದಲಾವಣೆ ಸಾಧ್ಯ. ಉತ್ತಮ ನಾಯಕತ್ವ ಬೆಳೆಸಲು ರಾಜಕೀಯ ಅವಕಾಶ ನೀಡುತ್ತದೆ. ಯುವಸಮುದಾಯ ಸೇವಾ ಮನೋಭಾವ ಬೆಳೆಸಿಕೊಳ್ಳಲು ರಾಜಕೀಯ ಸೇರಬೇಕೆಂದು ಸಚಿವರು ತಿಳಿಸಿದರು.

ಗೃಹಜ್ಯೋತಿ ಯೋಜನೆಯು ಧಾರವಾಡ ಜಿಲ್ಲೆ ಯಲ್ಲಿ ಉತ್ತಮ ಸ್ಪಂದನೆ ಗಳಿಸಿದ್ದು ಉಳಿದ ಗ್ರಾಹಕರು ಸಹ ಗೃಹಜ್ಯೋತಿ ಯೋಜನೆಗೆ ನೊಂದಾಯಿಸಿಕೊಳ್ಳಲು ಹೆಸ್ಕಾಂ ಸೂಕ್ತ ಪ್ರಚಾರ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಬೇ ಕೆಂದು ಅವರು ತಿಳಿಸಿದರು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿ ಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗು ತ್ತಿದೆ ಎಂದು ಸಚಿವರು ತಿಳಿಸಿದರು.

ಶಾಸಕ ಎನ್.ಎಚ್. ಕೋನರಡ್ಡಿ ಅವರು ಮಾತನಾಡಿ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯನ್ನು ರಾಜ್ಯ ಸರಕಾರ ಈಡೇರಿಸಿದೆ. ರೈತರಿಗೆ ಮತ್ತು ಗ್ರಾಹಕರಿಗೆ ತೊಂದರೆ ಆಗದಂತೆ ವಿದ್ಯುತ್ ಪೂರೈಕೆ ಮಾಡಬೇಕು ಮತ್ತು ಗೃಹ ಜ್ಯೋತಿ ಯೋಜನೆ ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು ಹೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿಗಳು ಇನ್ನಷ್ಟು ಕ್ರಿಯಾಶೀಲವಾಗಿ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಹೇಳಿದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ ರೋಷನ್ ಅವರು ಪ್ರಾಸ್ತಾವಿಕವಾಗಿ ಮಾತ ನಾಡಿ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಗೃಹಜ್ಯೋತಿ ಯೋಜನೆಗೆ ಉತ್ತಮ ಸ್ಪಂದನೆ ಸೀಗುತ್ತಿದೆ. ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಈಗಾಗಲೇ ಶೇ.90 ರಷ್ಟು ಮತ್ತು ಧಾರವಾಡ ಜಿಲ್ಲೆಯಲ್ಲಿ ಶೇ.80 ರಷ್ಟು ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.

ಧಾರವಾಡ ಜಿಲ್ಲೆಯ ಸುಮಾರು 5.4 ಲಕ್ಷ ಆರ್.ಆರ್ ನಂಬರಗಳ ಪೈಕಿ 4.2 ಲಕ್ಷ ಗ್ರಾಹಕರು ಆಗಸ್ಟ್ ತಿಂಗಳಲ್ಲಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು

ವಿವಿಧ ಗ್ರಾಹಕರಿಗೆ ಹೆಸ್ಕಾಂದಿಂದ ಝೀರೋ ಮೊತ್ತದ ಬಿಲ್ಲುಗಳನ್ನು ಸಾಂಕೇತಿಕವಾಗಿ ವಿತರಿಸ ಲಾಯಿತು.ಹೆಸ್ಕಾಂ ಗ್ರಾಹಕರ ಪರವಾಗಿ ಎಚ್.ಆರ್. ಕಮಡೊಳ್ಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕ ಶ್ರೀಕಾಂತ ಸಸಾಲಟ್ಟಿ ಸ್ವಾಗತಿಸಿದರು. ಆಕಾಶ ವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಪಾಲಕ ಅಭಿಯಂತರ ಎಸ್.ಜಗದೀಶ ಅವರು ವಂದಿಸಿದರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹೆಸ್ಕಾಂನ ಹಣಕಾಸು ವಿಭಾಗದ ನಿರ್ದೇಶಕ ಪ್ರಕಾಶ ಪಾಟೀಲ,

ಜಾಗೃತ ದಳದ ಪೊಲೀಸ್ ಅಧೀಕ್ಷಕ ಶಿರಕೋಳ ನಾಯಕ, ಮುಖ್ಯ ಅಭಿಯಂತರ ರಮೇಶ ಎಲ್ ಬೆಂಡಿಗೇರಿ ಸೇರಿದಂತೆ ವಿವಿಧ ಜನಪ್ರತಿನಿ ಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಧೀಕ್ಷಕ ಅಭಿಯಂತರರಾದ ಶರಣಮ್ಮ ಜಂಗಿನ, ಕಾರ್ಯಪಾಲಕ ಅಭಿಯಂತ ರರಾದ ಎಂ.ಟಿ. ದೊಡ್ಡಮನಿ, ಎಂ.ಎಂ. ನದಾಫ್, ಜಯಪ್ರದಾ ಪೂಜಾರ,ಸಹಾಯಕ ಕಾರ್ಯಪಾ ಲಕ ಅಭಿಯಂತರರಾದ ಮಂಜುನಾಥ ಟಿಂಗರಿ ಕರ್, ದೇವರಾಜ ಹೆಗಡೆ ಮತ್ತು ಸಹಾಯಕ ಅಭಿಯಂತರ ನಾಗಾರ್ಜುನ ಪಿ., ಸೇರಿದಂತೆ ಹೆಸ್ಕಾಂದ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯುತ್ ಗೃಹಬಳಕೆ ಸಂಘಗಳ ಸದಸ್ಯರು, ವಿದ್ಯುತ್ ಗ್ರಾಹಕರ ವೇದಿಕೆಯ ಸದಸ್ಯರು ಭಾಗವಹಿಸಿದ್ದರು.

ಕಿರುನಾಟಕ ಪ್ರದರ್ಶನ ಹೌದು ಕಾರ್ಯಕ್ರಮ ವೇದಿಕೆಯಲ್ಲಿ ರಾಜ್ಯ ಸರಕಾರದ ಗೃಹ ಜ್ಯೋತಿ ಯೋಜನೆಯ ಜನಜಾಗೃತಿಗಾಗಿ ಹೆಸ್ಕಾಂ ನೌಕರರ ತಂಡದವರು ಝೀರೊ ಬಿಲ್ ಕಿರುನಾಟಕ ಪ್ರದರ್ಶಿಸಿ, ಯೋಜನೆಯ ಪ್ರಯೋಜನೆ ಪಡೆಯುವ ಕುರಿತು ಸಾರ್ವಜನಿ ಕರಲ್ಲಿ ಅರಿವು ಮೂಡಿಸಲಾಯಿತು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


WhatsApp Group Join Now
Telegram Group Join Now
Suddi Sante Desk