ಧಾರವಾಡ –

ಕೋವಿಡ-19ಕ್ಕೆ ಬಲಿಯಾದ ಶಿಕ್ಷಕರ ಕುಟುಂಬಗಳಿಗೆ ಶಿಕ್ಷಕರ ಸಹಕಾರ ಸಂಘದಿಂದ ಧನ ಸಹಾಯದ ಚಕ್ ವಿತರಣೆ ಕುರಿತು

ಧಾರವಾಡ ತಾಲೂಕು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತು ಬೆಳೆಸುವ ಸಹಕಾರ ಸಂಘ ನಿ.ಧಾರವಾಡ ವತಿಯಿಂದ ಕೋವಿಡ- 19ಕ್ಕೆ ಬಲಿಯಾದ ಶಿಕ್ಷಕರ ಕುಟುಂಬದ ವಾರಸುದಾರರಿಗೆ ತಲಾ ರೂ 10,000-00 ರಂತೆ 5 ಜನರಿಗೆ ಅಂತೂ ಒಟ್ಟು ರೂ 50,000-00 ಗಳ ಧನ ಸಹಾಯದ ಚೇಕ್ ವಿತರಣೆ ಮಾಡಲಾಯಿತು ಮುಖ್ಯ ಅತಿಥಿಗಳಾಗಿ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಉಮೇಶ ಬೋಮ್ಮಕ್ಕನವರ, ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಯುತ ಗಿರೀಶ ಪದಕಿ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಯುತ M.B.ಪೂಜಾರ ರವರು ಆಗಮಿಸಿ, ಚಕ್ ಗಳನ್ನು ವಿತರಣೆ ಮಾಡಿದರು.

ಸಮಾರಂಭ ಅಧ್ಯಕ್ಷತೆಯನ್ನು ಸಹಕಾರ ಸಂಘದ ಅಧ್ಯಕ್ಷರಾದ ಗುರು ತಿಗಡಿ ವಹಿಸಿದ್ದರು.ಸಹಕಾರ ಸಂಘದ ಉಪಾಧ್ಯಕ್ಷರಾದ ಶಂಕರಪ್ಪ ಘಟ್ಟಿ ನಿರ್ದೇಶಕರಾದ A.R.ದೇಸಾಯಿ, R.M. ಹೊನ್ನಪ್ಪನವರ,K.S.ದೊಡವಾಡ, ಬಸವರಾಜ ದೇಸೂರ.ಶ್ರೀಮತಿ ಗಂಗವ್ವ ಕೋಟಿಗೌಡರ ಹಾಗೂ ಸಂಘದ ಸದಸ್ಯ ಶಿಕ್ಷಕರು, ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿ
ದ್ದರು

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಹಿರಿಯ ಅಧಿಕಾರಿಗಳಿಗೆ, ನೋಂದ ಕುಟುಂಬದ ವರಿಗೆ,ಸಂಘದ ಉಪಾಧ್ಯಕ್ಷರಿಗೆ, ಆಡಳಿತ ಮಂಡಳಿ ಎಲ್ಲ ನಿರ್ದೇಶಕರುಗಳಿಗೆ,ಸದಸ್ಯ ಶಿಕ್ಷಕರಿಗೆ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಸರ್ವರಿಗೂ ಸಂಘದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು


