ಹುಬ್ಬಳ್ಳಿ –
ಲಾಕ್ ಡೌನ್ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಗುಟ್ಕಾ ಗಾಗಿ ಹೊಡೆದಾಟ ನಡೆದಿದೆ.ಸಧ್ಯ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯದೆಲ್ಲೆಡೆ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಹೀಗಿರುವಾಗ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಕಾರಣಕ್ಕಾಗಿ ದುಪ್ಪಟ್ಟು ದರಕ್ಕೆ ಗುಟ್ಕಾವನ್ನು ಮಾರಾ ಟ ಮಾಡುವ ವಿಚಾರ ಕುರಿತಂತೆ ಮಾತಿಗೆ ಮಾತು ಬೆಳೆದು ಪೈಟಿಂಗ್ ಆಗಿದೆ.
ಹೌದು ಇಂಥಹದೊಂದು ಚಿತ್ರಣವೊಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಂಡು ಬಂದಿತು.ಹುಬ್ಬಳ್ಳಿಯ ಬಾರದಾನ ಸಾಲ್ ಏರಿಯಾಯಲ್ಲಿ ಹೊಡೆದಾಟದ ಘಟನೆಯೊಂದು ಕಂಡು ಬಂದಿದ್ದು ಹಾದಿ ಬೀದಿಯ ಲ್ಲಿ ಯುವಕರ ಟೀಮ್ ಪರಸ್ಪರ ಹೊಡೆದಾಡಿಕೊಂಡಿ ದ್ದಾರೆ.
ನಾಲ್ಕೈದು ಜನರಿಂದ ರಸ್ತೆ ಮಧ್ಯೆಯೇ ಹೊಡೆದಾಟ ವಾಗಿದ್ದು ಹೊಡೆದಾಟದ ದೃಶ್ಯ ಸ್ಥಳೀಯರ ಮೊಬೈ ಲ್ ನಲ್ಲಿ ಸೆರೆಯಾಗಿದೆ.ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.