ಹುಬ್ಬಳ್ಳಿ –
ಹಿಂದುಸ್ತಾನ್ ಕೋಕಾ ಕೋಲಾ ಕೋಲ್ಡ್ ಡ್ರಿಂಕ್ಸ್ ಪ್ರೈ.ಲಿ ಕಂಪನಿ ವತಿಯಿಂದ ನೀಡಲಾದ 5 ಲೀಟರ್ ಸಾಮರ್ಥ್ಯದ 10 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಗಳನ್ನು ಹುಬ್ಬಳ್ಳಿಯಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಾಯಿತು

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತ್ರತ್ವದಲ್ಲಿ ಇವು ಗಳನ್ನು ನೀಡಲಾಯಿತು.ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್‌ನಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವ ಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್,

ಹಿಂದುಸ್ತಾನ್ ಕೋಕಾ ಕೋಲಾ ಕೋಲ್ಡ್ ಡ್ರಿಂಕ್ಸ್ ಪ್ರೈ.ಲಿ ಕಂಪನಿ ವತಿಯಿಂದ ನೀಡಲಾದ 5 ಲೀಟರ್ ಸಾಮರ್ಥ್ಯದ 10 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು. ತಹಶೀ ಲ್ದಾರ ಶಶೀಧರ ಮಾಡ್ಯಾಳ ಅವರಿಗೆ ಇವುಗಳನ್ನು ಹಸ್ತಾಂತರ ಮಾಡಿದರು

ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ್ ಬೆಲ್ಲದ್, ಬಿಜೆಪಿ ಮುಖಂಡರಾದ ಮಹೇಶ್ ತೆಂಗಿನಕಾಯಿ, ಮಲ್ಲಿಕಾರ್ಜುನ ಸಾವುಕಾರ, ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ ಸೇರಿದಂತೆ ಕಂದಾಯ ಇಲಾಖೆ ಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.