ಹುಬ್ಬಳ್ಳಿ –
ಸದಾ ನಾಡು ನುಡಿ ವಿಚಾರದಲ್ಲಿ ಹೋರಾಟ ಮಾಡಿಕೊಂಡು ಸಮಾಜದ ಅಭಿವೃದ್ಧಿ ಗಾಗಿ ಶ್ರಮಿಸುತ್ತಿರುವ ಹೆಮ್ಮೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷರು ಹಾಗೂ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಸುರೇಶ ಗೋಕಾಕ್ ಅವರು ನಾಡಿನ ಮತ್ತು ಅವಳಿ ನಗರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಗಳನ್ನು ಕೋರಿದ್ದಾರೆ ಹೌದು
ದೀಪಾವಳಿ ಹಬ್ಬವು ನಮಗೆ ಪ್ರೀತಿ,ಸ್ನೇಹ ಮತ್ತು ಸಹೋದರತ್ವದ ಸಂದೇಶವನ್ನು ನೀಡುತ್ತದೆ. ಆದ್ದ ರಿಂದ ದೀಪಾವಳಿಯಂದು ನಾವು ಹೊಸ ಬಟ್ಟೆ ಸಿಹಿತಿಂಡಿಗಳು ಮತ್ತು ಹಣವನ್ನು ಅಗತ್ಯವಿರುವ ವರಿಗೆ ನೀಡಬೇಕು ಇದರಿಂದ ಅವರು ಈ ಹಬ್ಬ ವನ್ನು ಆನಂದಿಸಬಹುದು ಎಲ್ಲರಲ್ಲೂ ನಾನು ಮಾಡುವ ಇನ್ನೊಂದು ವಿನಂತಿಯೇನೆಂದರೆ ಕುಂಬಾರನು ಮಾಡಿದ ಮಣ್ಣಿನ ಹಣತೆಗಳನ್ನು ಖರೀದಿಸಿ ದೀಪಗಳನ್ನು ಬೆಳಗಿಸಿ
ದೀಪ ತನ್ನಲ್ಲಿರುವ ಕತ್ತಲ್ಲನ್ನು ದೂರ ಮಾಡುವಂತೆ ನಿಮ್ಮೆಲ್ಲರ ಬಾಳಿನಲ್ಲಿರುವ ಅಂಧಕಾರವನ್ನು ಅಳಿಸಿ ಹೊಸ ಚೈತನ್ಯ ಸೃಷ್ಟಿಸಲಿ ನಡೆಯುವ ದಾರಿಯು ಹೂವಿನ ಹಾಸಿನಂತೆ ಕಷ್ಟದ ಕಹಿ ನೆನಪು ಮರೆಯಾಗಲಿ.
ತಾವುಗಳು ಬೆಳಗಿಸುತ್ತಿರುವುದು ನಿಮ್ಮನೆಯ ನಂದಾ ದೀಪ ರಾಯಣ್ಣನ ದೀಪಗಳೆಂದರೂ ಅತಿಶಯೋಕ್ತಿಯೇನಲ್ಲ ಎಲ್ಲರಿಗೂ ಮಂಗಳ ವಾಗಲಿ ಎಂದು ಶುಭ ಹಾರೈಸುತ್ತ ಸಮಸ್ತ ನಾಡಿನ ಹಾಗೂ ಹುಬ್ಬಳ್ಳಿ ಧಾರವಾಡ ಜನತೆಗೆ ಬೆಳದಿಂಗಳ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..
ಶುಭಕೋರುವವರು – ಸುರೇಶ ಗೋಕಾಕ್, ಸಂಸ್ಥಾಪಕರು ಅಧ್ಯಕ್ಷರು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕ. ಹಾಗೂ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರ ಮತ್ತು ಸರ್ವ ಸದಸ್ಯರು.























